


ವಿರಾಜಪೇಟೆ ಮಾ.25 NEWS DESK : ಕೆದಮುಳ್ಳೂರು ಗ್ರಾಮದ ಶ್ರೀ ಭಗವತಿ (ಪೊವದಿ) ದೇವಿಯ ಹದಿನಾಲ್ಕನೇ ವಾರ್ಷಿಕ ಉತ್ಸವವು ಮಾ.26 ರಂದು ನಡೆಯಲಿದೆ. ಕೇರಳದ ಬೈತೂರಿನ ತಂತ್ರಿಗಳಾದ ಶ್ರೀ ರಾಜನ್ ನಂಬೂದರಿಪಾಡ್ ಉತ್ಸವದ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ದುರ್ಗಾ ಪೂಜೆ, 10 ಗಂಟೆಗೆ ಕಲಶ ಪೂಜೆ, 11 ಗಂಟೆಗೆ ಕಲಾಶಾಭಿಶೇಕ, 12 ಗಂಟೆಗೆ ಮಹಾಪೂಜೆ, ಅಪರಾಹ್ನ 3 ಗಂಟೆಗೆ ಬೆಲಿಕಲ್ಲು ಪೂಜೆ-ದೇವರ ನೃತ್ಯಬಲಿ ನಡೆಯಲಿದೆ. ಇದೇ ಸಂದರ್ಭ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.