



ಮಡಿಕೇರಿ ಮಾ.27 NEWS DESK : ಚೆಟ್ಟಳ್ಳಿ ಕಾಫಿ ಬೋಡ್೯ನಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದ 25ನೇ ವಷ೯ದ ಬೆಳ್ಳಿ ಮಹೋತ್ಸವದ ಅಂಗವಾಗಿ ಮಾ.29 ಮತ್ತು 30 ರಂದುದೇವಾಲಯ ನವೀಕರಣ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಮಾ.29 ಮತ್ತು 30 ರಂದು ಎರಡು ದಿನಗಳ ಕಾಲ ಕೇರಳದ ಬ್ರಹ್ಮಷಿ೯ ವೇದಮೂತಿ೯ ಶಿವಸುಬ್ರಹ್ಮಣ್ಯ ಭಟ್ಟ ಶುಳುವಾಲಮೂಲೆ ಅವರ ನೇತೃತ್ವದಲ್ಲಿ ಪೂಜಾ ಕಾಯ೯ಗಳು ನೆರವೇರಲಿದ್ದು, ಮಾ.29 ರಂದು ಬೆಳಗ್ಗೆ 9 ಗಂಟೆಗೆ ಸಪ್ತುಶುದ್ದಿ ಪುಣ್ಯಕ್ಷದೇವತಾ ಪ್ರಾಥ೯ನೆ, ಆಚಾಯ೯ ಪಠಣ, ಪ್ರಸಾದಶುದ್ದಿ, ಅನುಜ್ಞ ಕಳಶ. ಕಳಶ ಪ್ರತಿಷ್ಟೆ, ವೇದಪಾರಾಯಾಣ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತಪ೯ಣೆ ನೆರವೇರಲಿದೆ. ಸಂಜೆ 5 ಗಂಟೆಗೆ ಶ್ರೀ ಲಕ್ಷ್ಮಿಸಹಿತ ಶ್ರೀ ಸತ್ಯನಾರಾಯಣ ಪೂಜೆ, ರಕ್ತೋಘ್ನ ಹವನ, ವಾಸ್ತು ಪೂಜೆ, ವಾಸ್ತು ಬಲಿ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತಪ೯ಣೆ ನಡೆಯಲಿದೆ. ಮಾ.30 ರಂದು ಭಾನುವಾರ ಬೆಳಗ್ಗೆ 6 ಗಂಟೆಯಿಂದ 48 ತೆಂಗಿನಕಾಯಿ ಅಷ್ಟದ್ರವ್ಯದಿಂದ ಗಣಪತಿ ಹವನ, ಗಣಪತಿ ಅಥವ೯ ಶೀಷ೯ ಹವನ, ಬಿಂಬ ಸಾನಿಧ್ಯ ಹವನ, ಬೆಳಗ್ಗೆ 9 ಗಂಟೆಗೆ ಪೂಣಾ೯ಹುತಿ, 9.40 ಗಂಟೆ ನಂತರ ಗಣಪತಿಗೆ ಕಲಶಾಭಿಷೇಕ, ನಾಗದೇವರಿಗೆ ಕಳಶಾಭಿಷೇಕ, ಅಷ್ಟೋತ್ತರ ಪೂಜೆ, ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನಸಂತಪ೯ಣೆ ಏಪ೯ಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್.ಮಹೇಶ್ ಮತ್ತು ಕಾಯ೯ದಶಿ೯ ಅಪ್ಪುಕುಟ್ಟನ್ ಮಾಹಿತಿ ನೀಡಿದ್ದಾರೆ.