




ಮಡಿಕೇರಿ ಮಾ.27 NEWS DESK : ಇಬ್ನಿವಳವಾಡಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವವು ಮಾ.29 ಮತ್ತು 30ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ. ಮಾ.29 ರಂದು ಮಧ್ಯಾಹ್ನ 1.30 ಗಂಟೆಗೆ ಕೊಡಿಆಟ್, 2 ಗಂಟೆಗೆ ಆಂಗೋಲ, ಪೊಂಗೋಲ, 2.30 ಗಂಟೆಗೆ ಪೀಲಿ ಆಟ್, 3 ಗಂಟೆಗೆ ಕೊಂಬಾಟ್ ಜರುಗಲಿದೆ. ನಂತರ ದೇವಿಯ ದರ್ಶನ ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ಮಾ.30 ರಂದು ಸಂಜೆ 5 ಗಂಟೆಗೆ ಕೊಂಬಾಟ್, ದೇವಿಯ ದರ್ಶನ, ದೇವರ ಜಳಕ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.