





ಕುಶಾಲನಗರ ಮಾ.29 NEWS DESK : ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರ ಜೊತೆಗೆ ತಮ್ಮ ಜೀವನದ ಗುರಿ ಸಾಧಿಸುವ ಛಲ ಹೊಂದಬೇಕೆಂದು ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಪಿ.ಜೋಯಪ್ಪ ಹೇಳಿದರು. ಕುಶಾಲನಗರ ಸಮೀಪದ ಯಡವನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕುಶಾಲನಗರ ಮಹಾತ್ಮಾ ಗಾಂಧಿ ಸ್ಮಾರಕ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ರ ವಾರ್ಷಿಕ ವಿಶೇಷ ಶಿಬಿರದ ಎನ್.ಎನ್.ಎಸ್ ಜ್ಯೋತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣದ ನಂತರ ಯುವ ಜನಾಂಗ ಸರಕಾರಿ ಉದ್ಯೋಗಕ್ಕೆ ಅವಲಂಬಿಸದೆ ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅನ್ನದಾತರಾಗಬೇಕೆಂದು ಆಶಯ ವ್ಯಕ್ತಪಡಿಸಿದರು. ಕಾವೇರಿ ಸ್ವಚ್ಛತಾ ಅಭಿಯಾನದ ಸಂಚಾಲಕ ಎಂ.ಎನ್.ಚಂದ್ರಮೋಹನ್, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಇದೇ ಸಂದರ್ಭ ಶಿಬಿರಕ್ಕೆ ಸಹಾಯ ಹಸ್ತ ನೀಡಿದ ಪ್ರಮುಖರಾದ ಪಿ.ಜಿ.ಜನಾರ್ದನ್, ಕೆ.ಎಂ.ಗಣೇಶ್, ಪಿ.ಜಿ.ಶಶಿಧರ್ , ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಕಾಂಚನ, ಸಂದೇಶ್ , ವರದರಾಜ ಅರಸ್, ಸುನಿಲ್, ಬಿಪಿ ಜೋಯಪ್ಪ, ಚಂದ್ರಮೋಹನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮತ್ತು ಅತಿಥಿಗಳು ಸೇರಿ ಎನ್ಎಸ್ಎಸ್ ಜ್ಯೋತಿ ಹಚ್ಚಿದರು. ಈ ಸಂದರ್ಭ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ.ಎ.ಲಿಖಿತ, ಆಡಳಿತ ಅಧಿಕಾರಿ ಕೆ ಎನ್ ನಂಜಪ್ಪ, ಕಚೇರಿ ಅಧೀಕ್ಷಕರಾದ ಮಹೇಶ್ ಅಮೀನ್, ಯೋಜನೆಯ ಶಿಬಿರ ಅಧಿಕಾರಿಗಳಾದ ಕೆ.ಆರ್.ಮಂಜೇಶ್, ಶರಣ್, ದೇವೇಂದ್ರ ಉಪನ್ಯಾಸಕರು ಉಪನ್ಯಾಸಕಿಯರು ಮತ್ತು ಶಿಬಿರಾರ್ಥಿಗಳು ಇದ್ದರು.