Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
  • *ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*
  • *ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*
  • *ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*
  • *ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*
  • *ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*
  • *ಕೂಡಿಗೆಯಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ*
  • *ಧರ್ಮಜ ಉತ್ತಪ್ಪರಿಗೆ ಸನ್ಮಾನ : 2028ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಕೆ.ಜಿ.ಪೀಟರ್ ವಿಶ್ವಾಸ*
  • *ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*
  • *ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ : ಶ್ರೀ ಅಗ್ನಿಬನ್ನಿರಾಯರ ಆದರ್ಶವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಿ : ಮಂಜುಳ ಸಲಹೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ : ಶ್ರೀ ಅಗ್ನಿಬನ್ನಿರಾಯರ ಆದರ್ಶವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಿ : ಮಂಜುಳ ಸಲಹೆ*

ಮಾರ್ಚ್ 29, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.29 NEWS DESK : ತಿಗಳ ಸಮಾಜದ ಮೂಲಪುರುಷ ಶ್ರೀ ಅಗ್ನಿಬನ್ನಿರಾಯ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಗ್ನಿ ಬನ್ನಿರಾಯರಂತಹ ಮಹಾನ್ ಚೇತನಗಳ ಜೀವನಾದರ್ಶಗಳು ಮನುಕುಲದ ಹಾದಿಗೆ ಬೆಳಕಾಗಿದೆ ಎಂದು ಮಂಜುಳ ನುಡಿದರು. ಬೆಂಗಳೂರಿನ ಲಾಲ್‍ಬಾಗ್ ನಿರ್ಮಾಣಕ್ಕೆ ತಿಗಳ ಸಮಾಜ ಮೂಲ ಕಾರಣಕರ್ತರಾಗಿದ್ದಾರೆ. ತಿಗಳ ಸಮಾಜವು ಬೆಂಗಳೂರು, ತುಮಕೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು. ಪುರಾಣ, ಐತಿಹ್ಯಗಳಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಅವರ ಬಗ್ಗೆ ಉಲ್ಲೇಖವಿದ್ದು, ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಹಲವು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಪಿ.ಕವಿತ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಿವಿಧ ಜಯಂತಿಗಳನ್ನು ಆಚರಿಸುತ್ತಿದ್ದು, ಎಲ್ಲರೂ ಜಾಗೃತರಾಗಬೇಕು ಎಂದು ಅವರು ತಿಳಿಸಿದರು. ‘ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗಲು ಸರ್ಕಾರ ವಿದ್ಯಾರ್ಥಿಗಳಿಗೆ ಜಿಲ್ಲೆಗೆ ಸುಮಾರು 25 ಲಕ್ಷ ರೂ. ವೆಚ್ಚದ ಪುಸ್ತಕವನ್ನು ಒದಗಿಸಿದ್ದು, ಈ ಪುಸ್ತಕಗಳನ್ನು ಜಿಲ್ಲೆಯ 21 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ತಲಾ 170 ಪುಸ್ತಕ ಪೂರೈಕೆ ಮಾಡಲಾಗುತ್ತದೆ ಎಂದು ಪಿ.ಪಿ.ಕವಿತ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.’ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯ ಸೌಲಭ್ಯ ಪಡೆದು, ಉನ್ನತ ವ್ಯಾಸಂಗ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು. ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಎಚ್.ಜಿ.ಕುಮಾರ್ ಮಾತನಾಡಿ, ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಅವರ ಬದುಕಿನ ಕಾಲಾವಧಿಯಲ್ಲಿ ದುಷ್ಟರ ಅಟ್ಟಹಾಸ ನಿಯಂತ್ರಿಸುವಲ್ಲಿ ಅಗ್ನಿಬನ್ನಿರಾಯರ ಕೊಡುಗೆ ಹೆಚ್ಚಿನದ್ದಾಗಿದೆ. ಇವರೊಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಹಲವು ದಶಕಗಳಿಂದ ಆಚರಿಸಿಕೊಂಡು ಬಂದಿರುವ ಕರಗ ಉತ್ಸವಕ್ಕೆ ತಿಗಳ ಸಮಾಜದವರ ಕೊಡುಗೆ ಅಪಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಬ್ಲಾಸಂ ಶಾಲೆಯ ಶಿಕ್ಷಕರಾದ ಮಂಗಳಗೌರಿ ಅವರು ಮಾತನಾಡಿ ಅಗ್ನಿಬನ್ನಿರಾಯ ಸೇರಿದಂತೆ ಮಹಾನ್ ಪುರುಷರು ಮತ್ತು ಆದರ್ಶ ಮಹಿಳೆಯರನ್ನು ಪ್ರತಿಯೊಬ್ಬರೂ ಸ್ಮರಿಸುವಂತಾಗಬೇಕು ಎಂದು ಸಲಹೆ ಮಾಡಿದರು. ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ, ಕಲಾವಿದ ಈ.ರಾಜು ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 29, 2026

*ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*

ಸೆಪ್ಟೆಂಬರ್ 29, 2026

*ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*

ಸೆಪ್ಟೆಂಬರ್ 29, 2026

*ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*

ಸೆಪ್ಟೆಂಬರ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK  ಸೆ.29: ಕೊಡಗಿನ ಕೆಂಬಟ್ಟಿ ಸಮುದಾಯವು ತನ್ನದೇ ಆದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿದ್ದು, ಸಮುದಾಯದ…

*ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*

ಸೆಪ್ಟೆಂಬರ್ 29, 2026

*ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*

ಸೆಪ್ಟೆಂಬರ್ 29, 2026

*ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*

ಸೆಪ್ಟೆಂಬರ್ 29, 2026

*ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*

ಸೆಪ್ಟೆಂಬರ್ 29, 2026

*ಕೂಡಿಗೆಯಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ*

ಸೆಪ್ಟೆಂಬರ್ 29, 2026

*ಧರ್ಮಜ ಉತ್ತಪ್ಪರಿಗೆ ಸನ್ಮಾನ : 2028ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಕೆ.ಜಿ.ಪೀಟರ್ ವಿಶ್ವಾಸ*

ಸೆಪ್ಟೆಂಬರ್ 29, 2026

*ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*

ಸೆಪ್ಟೆಂಬರ್ 29, 2026

*ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*

ಸೆಪ್ಟೆಂಬರ್ 29, 2026

*ವಿರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಆರೋಗ್ಯದ ಪಾಠ*

ಸೆಪ್ಟೆಂಬರ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.