

ಕುಶಾಲನಗರ ಮಾ.31 NEWS DESK : ಕುಶಾಲನಗರ ಮಹಾತ್ಮಾ ಗಾಂಧಿ ಸ್ಮಾರಕ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024 -25ರ ವಾರ್ಷಿಕ ವಿಶೇಷ ಶಿಬಿರ ಕುಶಾಲನಗರ ಸಮೀಪದ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದು ಸಮಾರೋಪಗೊಂಡಿತು. ಶಿಬಿರ ಅಧಿಕಾರಿ ಕೆ.ಆರ್ಮಂ.ಜೇಶ್ ಮತ್ತು ಪ್ರಾಂಶುಪಾಲರಾದ ಟಿ.ಎ.ಲಿಖಿತ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ನಿತ್ಯ ಶಿಬಿರಾರ್ಥಿಗಳಿಗೆ ವ್ಯಾಯಾಮ, ಯೋಗ, ಶ್ರಮದಾನ, ವಿಶೇಷ ಉಪನ್ಯಾಸ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ, ಸಾಂಸ್ಥಿಕ ಕಾರ್ಯಕ್ರಮ ಸೇರಿದಂತೆ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ, ಶಾಲಾ ಆವರಣ ಸ್ವಚ್ಛತೆ, ಗಿಡಗಳನ್ನು ನೆಡುವ ಕಾರ್ಯಕ್ರಮ, ಗ್ರಾಮದಲ್ಲಿ ಜನರಿಗೆ ರೋಗ, ಗ್ರಾಮ ನೈರ್ಮಲ್ಯ ಆರೋಗ್ಯ ಕುರಿತು ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ವ್ಯಕ್ತಿ ವಿಕಸನ ನಾಯಕತ್ವ ತರಬೇತಿ ಮತ್ತಿತರ ಕಾರ್ಯಕ್ರಮಗಳು ನಡೆದವು. ಎನ್ ಎಸ್ ಎಸ್ ಗುರಿ ಮತ್ತು ಉದ್ದೇಶಗಳು, ಹಳ್ಳಿ ಸೊಗಡನ್ನು ಉಳಿಸುವಲ್ಲಿ ಜನಪದ ಸಾಹಿತ್ಯದ ಪಾತ್ರ, ರೈತ ದೇಶದ ಬೆನ್ನೆಲುಬು ಹಾಗೂ ಕೃಷಿಯಲ್ಲಿ ಯುವಜನತೆಯ ಪಾತ್ರ ಮತ್ತು ಪರಿಸರ ಜಾಗೃತಿ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. 40ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಕಾಲೇಜಿನ ಅಧೀಕ್ಷಕರಾದ ಮಹೇಶ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಸಮರೋಪ ಕಾರ್ಯಕ್ರಮದಲ್ಲಿ ಯಡವನಾಡು ಕೃಷಿಕರಾದ ಕೆ.ಎಂ.ಗಣೇಶ್ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪತ್ರಕರ್ತೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷರಾದ ವನಿತ ಚಂದ್ರಮೋಹನ್, ಪ್ರಾಂಶುಪಾಲರಾದ ಟಿ.ಎ.ಲಿಖಿತ ಮಾತನಾಡಿದರು. ಕಾರ್ಯಕ್ರಮ ಅಧಿಕಾರಿ ಕೆ ಆರ್ ಮಂಜೇಶ್ ಐದು ದಿನಗಳ ಶಿಬಿರದ ಸಮಗ್ರ ವರದಿಯನ್ನು ಸಭೆಗೆ ನೀಡಿದರು. ಪದವಿ ಕಾಲೇಜಿನ ವಿಭಾಗ ಮುಖ್ಯಸ್ಥರಾದ ಬಿ ಜೆ ಭವ್ಯ, ಶಿಬಿರದ ಸಹ ಶಿಬಿರಾಧಿಕಾರಿಗಳಾದ ಪಿ ಎಸ್ ದಿನೇಶ್ ಕುಮಾರ್ ಎಚ್ ಎನ್ ಲಾವಣ್ಯ ಜಿ ಸಿ ಮಂಜುಶ್ರೀ, ಶರಣ್ ದೀಪ್ತಿ ಡಿಸೋಜ, ಮಂಜುಶ್ರೀ ಲಾವಣ್ಯ ಮತ್ತಿತರ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.