




ಸೋಮವಾರಪೇಟೆ ಏ.1 NEWS DESK : ಉದಯ ಯುವಕ ಸಂಘ ಮತ್ತು ಯಡೂರು ಗ್ರಾಮಸ್ಥರ ಆಶ್ರಯದಲ್ಲಿ ಯುಗಾದಿ ಪ್ರಯುಕ್ತ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿಯನ್ನು ಸೋಮವಾರಪೇಟೆ ರಾಮಧೂತ ತಂಡ ಮುಡಿಗೇರಿಸಿಕೊಂಡಿದೆ. ಯಡೂರು ಯುವೈಸಿ ತಂಡ ದ್ವಿತೀಯ, ಕುಡಿಗಾಣ ಯಂಗ್‍ಸ್ಟಾರ್ಸ್ ತಂಡ ತೃತೀಯ ಹಾಗೂ ಪ್ರತಾಪ್ ಫ್ರೆಂಡ್ಸ್ ಯಡೂರು ತಂಡ ಚತುರ್ಥ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳೆಯರ ಥ್ರೋಬಾಲ್ ಪ್ರಶಸ್ತಿಯನ್ಯ ಭಾಗ್ಯ ಫ್ರೆಂಡ್ಸ್ ತಂಡ ಪಡೆಯಿತು. ಕೊಡ್ಲಿಪೇಟೆ ಶ್ರೀಗಣಪತಿ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಹಗ್ಗಾಜಗ್ಗಾಟದಲ್ಲಿ ಎಂಎಚ್ ಫ್ರೆಂಡ್ಸ್ ಹಾನಗಲ್‍ಶೆಟ್ಟಳ್ಳಿ ಪ್ರಥಮ, ಕುಡಿಗಾಣ ಯಂಗ್ ಸ್ಟಾರ್ ದ್ವಿತೀಯ ಸ್ಥಾನಗಳಿಸಿತು. ಮಹಿಳೆಯರ ವಿಭಾಗದಲ್ಲಿ ಭಾಗ್ಯ ಫ್ರೆಂಡ್ಸ್ ಪ್ರಥಮ, ವಿದ್ಯಾಸ್ವಹಾಯ ಸಂಘ ಯಡೂರು ತಂಡ ದ್ವಿತೀಯ ಸ್ಥಾನ ಪಡೆಯಿತು. ಗ್ರಾಮದ ಹಿರಿಯರಾದ ಎ.ಎಂ.ಆನಂದ, ಹೊನ್ನಪ್ಪ, ವೈ.ಎಂ.ಈರಪ್ಪ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವೈ.ಎಸ್.ಧನ್ಯ, ಪುಷ್ಪಾಂಜಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಡಾಕ್ಟರೇಟ್ ಪಡೆದ ಡಾ.ಸಿ.ಆರ್.ಅಜಿತ್, ಎಂ.ಬಿ.ಶೌರ್ಯ ಅವರುಗಳನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಉದಯ ಯುವಕ ಸಂಘದ ಅಧ್ಯಕ್ಷ ಚಿನ್ನಪ್ಪ, ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಇ.ಮಲ್ಲಪ್ಪ, ಪ್ರಮುಖರಾದ ಹರಪಳ್ಳಿ ರವೀಂದ್ರ, ಬಿ.ಜೆ.ದೀಪಕ್, ಬಗ್ಗನ ಸುದೀಪ್, ಮಿಥುನ್ ಹಾನಗಲ್, ಡಿ.ಎಸ್.ರಘು, ಪ್ರಕಾಶ್, ಕೆ.ಎಂ.ಲೋಕೇಶ್ ಮತ್ತಿತರ ಗಣ್ಯರು ಇದ್ದರು.