




ಮಡಿಕೇರಿ ಏ.1 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ : ಏ.1 ರಂದು ನಡೆದ ಪಂದ್ಯಾವಳಿಯ ವಿಜೇತ ತಂಡಗಳ ವಿವರ >> ಕೋಡಿರ ಮತ್ತು ಕೊಡಂದೇರ ತಂಡ >> ವಾಕ್ ಓವರ್ ನಲ್ಲಿ ಕೋಡಿರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಮೈದಾನ 1 :: ಮಂಗೇರಿರ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಕ್ಕಪಂಡ ತಂಡ ಗೆಲುವು ದಾಖಲಿಸಿತು. ತಂಡದ ಪರ ಪುತ್ತು ಅಯ್ಯಪ್ಪ ಗೋಲು ದಾಖಲಿಸಿದರು. ಡೆನ್ನಿ ಗಣಪತಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಮರುವಂಡ ಮತ್ತು ಮಾಣಿಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿಪಂಡ ತಂಡ 4-3 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮಾಣಿಪಂಡ ತಂಡದ ದೀಪು ಗಣಪತಿ, ಬೋಪಣ್ಣ, ಬಬಿನ್ ಬೆಳ್ಯಪ್ಪ ಹಾಗೂ ಸಂಪತ್ ತಲಾ 1 ಗೋಲು ದಾಖಲಿಸಿದರು. ಮರುವಂಡ ತಂಡದ ಭವಿಷ್ ಮಾದಪ್ಪ 2 ಹಾಗೂ ಧವನ್ ಬೋಪಣ್ಣ 1 ಗೋಲು ಬಾರಿಸಿದರು. ಧವನ್ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಜನರಾದರು. ಮಂಡೀರ ಮತ್ತು ಮಂಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡ ಟೈಬ್ರೇಕರ್ ಮೂಲಕ ಜಯ ಸಾಧಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ ಮಂಡೀರ ತಂಡದ ಶಿಶರ್ ಒಂದು ಗೋಲು ಗಳಿಸಿದರೆ, ಎದುರಾಳಿ ಮಂಡೆಯಂಡ ತಂಡದ ಚಿರಾಗ್ ಚಿಣ್ಣಪ್ಪ ಒಂದು ಗಳಿಸುವುದರೊಂದಿಗೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ವಿಜೇತ ತಂಡವನ್ನು ನಿರ್ಧರಿಸಲು ಅಳವಡಿಸಿದ ಟೈಬ್ರೇಕರ್‍ನಲ್ಲಿ ಶಿಶರ್ ಮತ್ತು ಜಗ್ಗು ತಲಾ ಒಂದು ಗೋಲು ಗಳಿಸಿದರೆ, ಮಂಡೆಯಡ ಪರವಾಗಿ ಚಿರಾಗ್ ಚಿಣ್ಣಪ್ಪ ಒಂದು ಗೋಲು ದಾಖಲಿಸಿದರು. ಅಂತಿಮವಾಗಿ ಮಂಡೀರ ತಂಡ 3-2 ಗೋಲುಗಳ ಅಂತರದ ಪ್ರಯಾಸದ ಗೆಲುವನ್ನು ದಾಖಲಿಸಿತು. ಮಂಡೆಯಂಡ ತಂಡದ ಚಿರಾಗ್ ಚಿಣ್ಣಪ್ಪ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊಜ್ಜಂಗಡ ಮತ್ತು ಪಟ್ರಪಂಡ ನಡುವಿನ ಪಂದ್ಯ ಯಾವುದೇ ಗೋಲು ಇಲ್ಲದೆ ಡ್ರಾ ಆಯಿತು. ನಂತರ ನಡೆದ ಟೈ ಬ್ರೆಕರ್‍ನಲ್ಲಿ ಬೊಜ್ಜಂಗಡ ತಂಡ 4 ಮತ್ತು ಪಟ್ರಪಂಡ ತಂಡ 2 ಗೋಲು ದಾಖಲಿಸಿದವು. ಬೊಜ್ಜಂಗಡ ತಂಡದ ಸೋಮೇಶ್ ಚಂಗಪ್ಪ ಪ್ಲೆಯರ್ ಆಫ್ ದಿ ಪ್ರಶಸ್ತಿ ಪಡೆದರು. ಪಟ್ಟಚೆರುವಂಡ ಮತ್ತು ಚೆಟ್ರುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಚೆರುವಂಡ ತಂಡ 4-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಪಟ್ಟಚೆರುವಂಡ ತಂಡದ ಗಗನ್ ಮೇದಪ್ಪ ತಲಾ 2, ಜೀವನ್ ಮುದ್ದಪ್ಪ ಹಾಗೂ ಯೋಗ್ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಪಟ್ಟಚೆರುವಂಡ ನಂಜಪ್ಪ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು) ನಡುವಿನ ಪಂದ್ಯದಲ್ಲಿ ಪಟ್ಟಡ ತಂಡ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ತಂಡದ ಪರ ಶರತ್ ಹಾಗೂ ಸತೀಶ್ ತಲಾ 2, ಪೊನ್ನಣ್ಣ 1 ಗೋಲು ದಾಖಲಿಸಿದರು. ಮುಕ್ಕಾಟಿರ ತೇಜ್ ತಿಮ್ಮಯ್ಯ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೋಟನಾಳಿರ ಮತ್ತು ಬೊಳ್ತಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ತಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಳ್ತಂಡ ಕಿರಣ್ ಗೋಲು ದಾಖಲಿಸಿದರು. ಪವನ್ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 2 :: ಬೇಪಡಿಯಂಡ ಮತ್ತು ಅಲ್ಲಾಂಡ ತಂಡಗಳ ವಾಕ್ ಓವರ್ ನಲ್ಲಿ ಅಲ್ಲಾಂಡ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಕಂಬೇಯಂಡ ಮತ್ತು ಮಾಚ್ಚೆಟ್ಟಿರ ತಂಡಗಳ ನಡುವಿನ ಪಂದ್ಯಾಟದಲ್ಲಿ 4-0 ಗೋಲುಗಳ ಅಂತರದಲ್ಲಿ ಕಂಬೇಯಂಡ ತಂಡ ಗೆಲುವು ಸಾಧಿಸಿತು. ಕಂಬೇಯಂಡ ವಿಶ್ವ ಉತ್ತಪ್ಪ, ತಿನಿತ್, ಆದಿ ಅಚ್ಚಯ್ಯ ಹಾಗೂ ಸತಿಲ್ ಪೊನ್ನಪ್ಪ ತಲಾ 1 ಗೋಲು ದಾಖಲಿಸಿದರು. ಮಾಚ್ಚೆಟ್ಟಿರ ಭೂಮಿಕಾ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಳೆಯಂಡ ಮತ್ತು ಚಿಮ್ಮುಣಿರ ತಂಡಗಳ ನಡುವಿನ ವಾಕ್ ಓವರ್‍ನಲ್ಲಿ ಪಳೆಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಕಾನತಂಡ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೇರ ತಂಡ 1-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮೂಕಳೇರ ಪೆಮ್ಮಯ್ಯ ಗೋಲು ಬಾರಿಸಿ ಗೆಲುವಿಗೆ ಸಹಕಾರಿಯಾದರು. ಕಾನತಂಡ ತಂಡದ ಆಟಗಾರ ಸುಬ್ಬಯ್ಯ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಭಜನರಾದರು. ಕಾರೇರ ಮತ್ತು ಕಲ್ಲೇಂಗಡ (ಬೆಳ್ಳೂರು) ತಂಡಗಳ ನಡುವಿನ ವಾಕ್ ಓವರ್ ನಲ್ಲಿ ಕಲ್ಲೇಂಗಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ನೆರಪಂಡ ಮತ್ತು ಕಾಂಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡಂಡ ತಂಡ 5-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಂಡಂಡ ಪರ ಕೌಶಿ ಕುಶಾಲಪ್ಪ 2, ಆಶಿಕ್ ಈರಪ್ಪ 1, ನಿತೇಶ್ ಸುಬ್ರಮಣಿ ಹಾಗೂ ಪ್ರಿತನ್ ಪೂಣಚ್ಚ ತಲಾ 1 ಗೋಲು ದಾಖಲಿಸಿದರು. ನೆರಪಂಡ ತಂಡದ ಸುಭಾಷ್ ಸೋಮಣ್ಣ 1 ಗೋಲು ಬಾರಿಸಿ, ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆರಿಯಂಡ ಮತ್ತು ಪೂಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರಿಯಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚೆರಿಯಂಡ ಗಾಯಕ್ ಗಣಪತಿ 2 ಹಾಗೂ ತನಿಶ್ ತಿಮ್ಮಯ್ಯ 1 ಗೋಲು ದಾಖಲಿಸಿದರು. ಪೂಳಂಡ ತಂಡದ ಅರ್ಜುನ್ ಕಾಳಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 3 : : ಮಾದೇಟಿರ ಮತ್ತು ಮಲ್ಚೀರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಮಲ್ಚೀರ ತಂಡ ಜಯ ಸಾಧಿಸಿತು. ಮಲ್ಚೀರ ತಂಡದ ಪರ ಧ್ಯಾನ್ ಸೋಮಣ್ಣ 2, ಸಂಪತ್ ಕುಟ್ಟಪ್ಪ ಹಾಗೂ ಹರ್ಷ ತಲಾ 1 ಗೋಲು ದಾಖಲಿಸಿದರು. ಟಿನ್ಸಿ ತಿಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೋಡಿರ ಮತ್ತು ಕೊಡಂದೇರ ತಂಡಗಳ ನಡುವಿನ ವಾಕ್ ಓವರ್ ನಲ್ಲಿ ಕೋಡಿರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಪಾಲೆಕಂಡ ಮತ್ತು ಬಾಚಿರ ತಂಡಗಳ ವಾಕ್ ಓವರ್ ನಲ್ಲಿ ಪಾಲೆಕಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಡುವಮಂಡ ಮತ್ತು ಮೇದುರ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಮಂಡ 5-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಬಡವಮಂಡ ತಂಡದ ಪರ ಗೌತಮ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಜೀವನ್ ಹಾಗೂ ಅಯ್ಯಪ್ಪ ತಲಾ 1 ಗೋಲು ಬಾರಿಸಿದರು. ಮೇದುರ ತಂಡದ ಕಂಠಿ ನಾಣಿಯಪ್ಪ 1 ಗೋಲು ಬಾರಿಸಿದರು. ಮೇದುರ ತರುಣ್ ತಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಪಳಂಗೇಟಿರ ಮತ್ತು ಪೋತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗೇಟಿರ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಳಂಗೇಟಿರ ತಂಡದ ಅವಿನಾಶ್ ಹಾಗೂ ಸತೀಶ್ ತಲಾ 1 ಗೋಲು ದಾಖಲಿಸಿದರು. ಪೋತಂಡ ರಾಜಾ ತಿಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳಿಸಿದರು. ಪೋತಂಡ ತಂಡ ಗೋಲ್ ಕೀಪರ್ ಇಲ್ಲದೆ ಪಂದ್ಯಾವಳಿಯಲ್ಲಿ ಸೆಣಸಾಡಿದ್ದು, ವಿಶೇಷವಾಗಿತ್ತು. ಬೈರಾಜಂಡ ಮತ್ತು ಬಾಳೆಕುಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಬೈರಾಜಂಡ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೈರಾಜಂಡ ತಂಡದ ಪರ ಆದರ್ಶ್ ಅಯ್ಯಪ್ಪ, ದರ್ಶನ್ ಹಾಗೂ ಕಾರ್ಯಪ್ಪ ತಲಾ 1 ಗೋಲು ಗಳಿದರು. ಬಾಳೆಕುಟ್ಟಿರ ತಂಡದ ಪರ ವಿನಿ ಪೆಮ್ಮಯ್ಯ 1 ಗೋಲು ದಾಖಲಿಸಿದರು. ಬಾಳೆಕುಟ್ಟಿರ ಕೀರ್ತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೊಟ್ಟೆರ ಮತ್ತು ಪಳಂಗಿಯಂಡ ನಡುವೆ ನಡೆದ ಪಂದ್ಯದಲ್ಲಿ ಚೊಟ್ಟೆರ ತಂಡ 5-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚೊಟ್ಟೆರ ತಂಡದ ಪರ ಕವನ್ ಕಾರ್ಯಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ದೀಪಕ್ ಸುಬ್ಬಯ್ಯ ಹಾಗೂ ಪೂವಣ್ಣ ತಲಾ 1 ಗೋಲು ಬಾರಿಸಿದರು. ಪಳಂಗಿಯಂಡ ತಂಡದ ಪರ ಚಂದನ್ ಹಾಗೂ ಮಾಚಯ್ಯ ತಲಾ 1 ಗೋಲು ದಾಖಲಿಸಿದರು. ಪಳಂಗಿಯಂಡ ಚಂದನ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.