




ಸೋಮವಾರಪೇಟೆ ಏ.2 NEWS DESK : ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ, ಮಹಾನಗರ ಪಾಲಿಕೆಯಲ್ಲಿ ಅಲ್ಪಸಂಖ್ಯಾಯತರ ಕಾಲನಿ ಅಭಿವೃದ್ಧಿ ಯೋಜನೆ, ಅಲ್ಪ ಸಂಖ್ಯಾಯತರ ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆಯಲ್ಲಿ ಬಜೆಗುಂಡಿ ಕಾಲೋನಿಯಲ್ಲಿ ರೂ.47.50ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಕ್ರಿಟ್ ರಸ್ತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೇಳೂರು ಗ್ರಾ.ಪಂ ಅಧ್ಯಕ್ಷೆ ಪಾರ್ವತಿ, ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಕುಮಾರ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಪಕ್ಷದ ಪ್ರಮುಖರಾದ ಸುರೇಂದ್ರ, ಕೆ.ಎ.ಪ್ರಕಾಶ್, ಅಬ್ದುಲ್ ರಜಾಕ್, ಸುನಿಲ್, ಲಾರೆನ್ಸ್, ಅಶ್ರಪ್, ಪಿಡಿಒ ಮೋಹನ್ ಇದ್ದರು.