




ಮಡಿಕೇರಿ ಏ.5 NEWS DESK : ಜಿಲ್ಲೆಯ ಪ್ರತಿಷ್ಠಿತ ಯುವಕ ಮಂಡಲದಲ್ಲಿ ಒಂದಾದ ತಾಳತ್ತಮನೆಯ ನೇತಾಜಿ ಯುವಕ ಮಂಡಲದ ವಾರ್ಷಿಕ ಮಹಾ ಸಭೆಯು ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಯುವ ಸಂಘದ ಅಧ್ಯಕ್ಷ ಕೊಂಡಿರ ಪಿ. ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಭಾರಿ ಸಂಘದ ವಾರ್ಷಿಕೋತ್ಸವವನ್ನು ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿ ಬಾಲ್ ಪಂದ್ಯಾಟದೊಂದಿಗೆ ಯಶಸ್ವಿಯಾಗಿ ನಡೆಸಿರುವುದನ್ನು ಹಿರಿಯ ಸದಸ್ಯರು ಶ್ಲಾಘಿಸಿದರು. ಕಾರ್ಯದರ್ಶಿ ಬಿ.ಬಿ.ದಿವೇಶ್ ರೈ ವಾರ್ಷಿಕ ವರದಿಯನ್ನು ವಾಚಿಸಿದರು. ನಂತರ ಸಂಘದ 2024-25 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ಇದೇ ಸಂದರ್ಭ ಕ್ರೀಡಾ ಕೂಟವನ್ನು ನಡೆಸಲು ಸಹಕರಿಸಿದ ಸರ್ವರಿಗೂ ಹಾಗು ಕ್ರೀಡಾ ಕೂಟ ಯಶಸ್ವಿಗೆ ಶ್ರಮಿಸಿದ ಸದಸ್ಯರಿಗೂ ಅಧ್ಯಕ್ಷರು ಧನ್ಯವಾದ ಅರ್ಪಿಸಿದರು. ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ :: ಸಭೆಯಲ್ಲಿ 2025-26 ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕೊಂಡಿರ ಪಿ. ಕಾರ್ಯಪ್ಪ, ಉಪಾಧ್ಯಕ್ಷರಾಗಿ ಸಿ.ಸುರೇಶ್ ಕುಮಾರ್, ಕಾರ್ಯದರ್ಶಿಯಾಗಿ ಬಿ.ಬಿ.ದಿವೇಶ್ ರೈ, ಸಹ ಕಾರ್ಯದರ್ಶಿಯಾಗಿ ಎ.ಕಿರಣ್, ಖಜಾಂಚಿಯಾಗಿ ಡಿ.ಪಿ. ಮಿಲನ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಜಿ.ಪ್ರೀತಂ, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಎಸ್.ನಯನ್ ರೈ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಿ.ಎಸ್.ಪುರುಶೋತ್ತಮ ಆಯ್ಕೆಯಾದರು. ಇದೇ ಸಂದರ್ಭ ಯುವಕ ಮಂಢಲದ ಸಲಹಾ ಸಮಿತಿ ಅಧ್ಯಕ್ಷ ಚೆಟ್ಟೋಳಿರ ಗಿರೀಶ್ ಅಪ್ಪಯ್ಯ ಇವರನ್ನು ಆಯ್ಕೆಯಾದರು.