





ಮೈದಾನ 1 :: ಅಪ್ಪಂಡೇರಂಡ ಮತ್ತು ಕಾಳಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಳಿಮಾಡ ತಂಡದ ಪರ ಶರತ್ ಮುತ್ತಪ್ಪ ಎರಡು ಗೋಲು ದಾಖಲಿಸಿದರು. ಅಪ್ಪಂಡೇರಂಡ ಬೋಪಣ್ಣ ಒಂದು ಗೋಲು ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ತಾಪಂಡ ಮತ್ತು ಬಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ತಾಪಂಡ ಗೆಲುವು ಸಾಧಿಸಿತು. ತಾಪಂಡದ ಪರ ಸೋಮೇಶ್ 2 ಹಾಗೂ ವಿಜು 1 ಗೋಲು ದಾಖಲಿಸಿದರು. ಬಲ್ಲಂಡ ಚೆಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಚೇನಂಡ ಮತ್ತು ಚೀಯಂಡಿರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೇನಂಡ ಗೆಲುವು ಸಾಧಿಸಿತು. ಚೇನಂಡ ಪರ ಪುಟ್ಟ ಉತ್ತಪ್ಪ, ಮೌರ್ಯ ತಿಮ್ಮಯ್ಯ ಹಾಗೂ ಚಮನ್ ಮಂದಣ್ಣ ತಲಾ 1 ಗೋಲು ದಾಖಲಿಸಿದರು. ಕಿಲನ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೋಯಮಾಡಂಡ ಮತ್ತು ಮೂಡೇರ ತಂಡಗಳ ನಡುವಿ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೋಯಮಾಡಂಡ ತಂಡ ಗೆಲುವು ದಾಖಲಿಸಿತು. ಚೋಯಮಾಡಂಡ ಮುದ್ದಪ್ಪ 1 ಗೋಲು ದಾಖಲಿಸಿದರು. ಮೂಡೇರ ಪೊನ್ನಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಪ್ಪಾರಂಡ ಮತ್ತು ಮೂಕಚಂಡ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪೆನಾಲ್ಟಿ ಸ್ಟ್ರೋಕ್ಸ್‍ನಲ್ಲಿ 5-4 ಗೋಲುಗಳ ಅಂತರದಲ್ಲಿ ಅಪ್ಪಾರಂಡ ತಂಡ ಜಯ ಸಾಧಿಸಿತು. ಮೂಕಚಂಡ ವಿನೀಶ್ ಮುತ್ತಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 2 :: ಕಂಡ್ರತಂಡ ಮತ್ತು ಅಜ್ಜೇಟಿರ ತಂಡಗಳ ನಡುವಿನ ಪಂದ್ಯದಲ್ಲಿ 7-0 ಗೋಲುಗಳ ಅಂತರದಲ್ಲಿ ಅಜ್ಜೇಟಿರ ತಂಡ ಗೆಲುವು ಸಾಧಿಸಿತು. ಅಜ್ಜೇಟಿರ ತಂಡದ ಪರ ಮೋಹನ್ ಸೋಮಯ್ಯ, ಅಚಲ್ ಗಣಪತಿ ಹಾಗೂ ಪೊನ್ನಣ್ಣ ತಲಾ 2 ಮತ್ತು ಶಂಭು ಪಳಂಗಪ್ಪ ಒಂದು ಗೋಲು ಬಾರಿಸಿದರು. ಕಂಡ್ರತಂಡ ಇಶಾನ್ ಅಪ್ಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಯ್ಯರಣಿಯಂಡ ಮತ್ತು ಕೋಳುಮಾಡಂಡ ನಡುವಿನ ಪಂದ್ಯದಲ್ಲಿ ಕೋಳುಮಾಡಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೋಳುಮಾಡಂಡ ಪರ ಚರಣ್ ಚರ್ಮಣ್ಣ 2 ಮತ್ತು ಕಿರಣ್ 1 ಗೋಲು ದಾಳಲಿಸಿದರು. ಲಿಖಿತ್ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು. ಮುಕ್ಕಾಟಿರ (ಕಡಗದಾಳ್) ಹಾಗೂ ಗಾಂಡಂಗಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಮುಕ್ಕಾಟಿರ ಪರ ನಾಣಯ್ಯ 2, ಅಶ್ವಿನ್ ಚರ್ಮಣ್ಣ, ಯಶ್ ಅಪ್ಪಯ್ಯ ಹಾಗೂ ಕಾವ್ಯ ದೇವಯ್ಯ ತಲಾ 1 ಗೋಲು ದಾಖಲಿಸಿದರು. ಬಿನ್ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಂದುರ ಮತ್ತು ಪೊರ್ಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚಂದುರ ಗೆಲುವು ದಾಖಲಿಸಿತು. ಚಂದುರ ಪರ ದೇವಯ್ಯ 1 ಗೋಲು ದಾಖಲಿಸಿದರು. ಲವ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೂಕಂಡ ಮತ್ತು ಪುಟ್ಟಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮೂಕಂಡ ಪರ ಮಿತೇಶ್ ಮಾಚಯ್ಯ 1 ಗೋಲು ದಾಖಲಿಸಿದರು. ಪುಟ್ಟಿಚಂಡ ಅರುಣ್ ಪೆಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪುಲಿಯಂಡ ಮತ್ತು ಕುಂಡ್ಯೋಳಂಡ ನಡುವಿನ ಪಂದ್ಯದಲ್ಲಿ ಟೈ ಬ್ರೇಕರ್‍ನಲ್ಲಿ 3-2 ಗೋಲುಗಳ ಅಂತರದಲ್ಲಿ ಕುಡ್ಯೋಳಂಡ ಗೆಲುವು ಸಾಧಿಸಿತು. ಪುಲಿಯಂಡ ದನುಷ್ ಮುದ್ದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 3 :: ಚೆಂಗೇಟಿರ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮುಕ್ಕಾಟಿರ ಪರ ತರುಣ್ ಮಾಚಯ್ಯ 2, ಹೇಮಂತ್ ಚಂಗಪ್ಪ ಹಾಗೂ ಸುತನ್ ಸುಬ್ಬಯ್ಯ ತಲಾ 1 ಗೋಲು ದಾಖಲಿಸಿದರು. ಚೆಂಗೇಟಿರ ಕರುಂಬಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಅಳಮೇಂಗಡ ಮತ್ತು ಚೆರುವಾಳಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೆರುವಾಳಂಡ ಗೆಲುವು ಸಾಧಿಸಿತು. ಚೆರುವಾಳಂಡ ಜೀತ್ ಕಾಳಪ್ಪ 1 ಗೋಲು ದಾಖಲಿಸಿದರು. ಅಳಮೇಂಗಡ ಅಗಸ್ಥ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಕಾಂಗೀರ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ಸಣ್ಣುವಂಡ ತಂಡ 4-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಸಣ್ಣುವಂಡ ಕೆ.ಉತ್ತಪ್ಪ 2, ಎಸ್.ಎಂ.ಮಾದಯ್ಯ ಹಾಗೂ ಎಸ್.ಜೆ.ರಿಯಾನ್ ತಲಾ 1 ಗೋಲು ದಾಖಲಿಸಿದರು. ಕಾಂಗೀರ ಆಕಾಶ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಲ್ಲಿರ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಸೋಮೆಯಂಡ ತಂಡ ಜಯ ಸಾಧಿಸಿತು. ಸೋಮೆಯಂಡ ಪರ ಅಪ್ಪಯ್ಯ 2 ಹಾಗೂ ಪುನೀತ್ 1 ಗೋಲು ದಾಖಲಿಸಿದರು. ಕೊಲ್ಲಿರ ಲಶಿತ್ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಾಚಂಗಡ ಮತ್ತು ಅಲ್ಲಾರಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಲ್ಲಾರಂಡ ಜಯ ಸಾಧಿಸಿತು. ಅಲ್ಲಾರಂಡ ಪರ ಗೌತಮ್ ಗಣಪತಿ 1 ಗೋಲು ದಾಖಲಿಸಿದರು. ಮಾಚಂಗಡ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಬಿದ್ದೇರಿಯಂಡ ಮತ್ತು ಓಡಿಯಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಓಡಿಯಂಡ ತಂಡ ಗೆಲುವು ದಾಖಲಿಸಿತು. ಓಡಿಯಂಡ ಪರ ಮಾಚಯ್ಯ 2, ವಿನ್ಸಿ ಪೊನ್ನಣ್ಣ ಹಾಗೂ ರವಿ ಕಾವೇರಪ್ಪ ತಲಾ 1 ಗೋಲು ದಾಖಲಿಸಿದರು. ಬಿದ್ದೇರಿಯಂಡ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.