





ವಿರಾಜಪೇಟೆ ಏ.6 NEWS DESK : ಭಾರತದ ಜಾನಪದ ಇತಿಹಾಸದಲ್ಲಿ ಪ್ರಪ್ರಥಮ ಜಾನಪದ ಆಧಾರಿತ ಸಂಗ್ರಹ ಪುಸ್ತಕ ಪಟ್ಟೋಲೆ ಪಳಮೆಯನ್ನು ಪ್ರಕಟಿಸಿದ, ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ, ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ, ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಕೊಡವ ಜಾನಪದ ನಾಳ್ ಮತ್ತು ಕೊಡವಾಮೆಗಾಗಿ ಎಲೆಮರೆಯಲ್ಲಿ ದುಡಿಯುತ್ತಿರುವ ಸುಮಾರು 250 ಜನರಿಗೆ, ದಿವಂಗತ ಮುಕ್ಕಾಟಿರ ಶಿವು ಮಾದಪ್ಪ ನೆನಪಿನಲ್ಲಿ ಸ್ಮರಣಿಕೆ ವಿತರಣಾ ಕಾರ್ಯಕ್ರಮ ವಿರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದ ಮೊದಲಿಗೆ ಅತಿಥಿ ಗಣ್ಯರನ್ನು ಕೊಡವ ಸಂಪ್ರದಾಯದಂತೆ ದುಡಿಕೊಟ್ಟ್ ಪಾಟ್ ಮೂಲಕ ಸ್ವಾಗತಿಸಿದರು. ಬಳಿಕ ಅತಿಥಿ ಗಣ್ಯರು ನಡಿಕೇರಿಯಂಡ ಚಿಣ್ಣಪ್ಪ ಅವರ ಭಾವಚಿತ್ರಕ್ಕೆ ನಮಿಸಿ ಅಕ್ಷತೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ತಜ್ಞ ಬಾಚರಣಿಯಂಡ ಬಿ.ಅಪ್ಪಣ್ಣ ಮಾತನಾಡಿ, ಜಾನಪದಕ್ಕೆ ಮೊಟ್ಟ ಮೊದಲಿಗೆ ವೈಜ್ಞಾನಿಕ ನೆಲೆಯಲ್ಲಿ ಸ್ವರೂಪವನ್ನು ದೇಶಿ ಶಕ್ತಿಯಾಗಿ ಪ್ರಚುರಪಡಿಸಿದ ನಡಿಕೇರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಜಾನಪದ ಕ್ಷೇತ್ರಕ್ಕೆ ಮಹಾನ್ ಕೊಡುಗೆ. ಕಾವೇರಿ ನಾಡಿನ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವುಗಳು ಕೊಡವ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತಾಗಬೇಕು. ಕೊಡವ ಭಗವದ್ಗೀತೆ ಎಂದೇ ಕರೆಯುವ ಪಟ್ಟೋಳೆ ಪಳಮೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಪಟ್ಟೋಲೆ ಪಳಮೆ ಭಾಷೆ ಹಾಗೂ ಸಂಸ್ಕøತಿಯ ಬೆಳವಣಿಗೆಯಲ್ಲಿ ಮಹತ್ವದ ಕೆಲಸವನ್ನು ಮಾಡಿದೆ. ಇಂತಹ ಅಮೂಲ್ಯ ಕೃತಿಯನ್ನು ರಚಿಸಿದ ಚಿಣ್ಣಪ್ಪ ಅವರ ಜನ್ಮಾದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದರ ಮೂಲಕ ಸ್ಮರಿಸಿ ಜಾನಪದ ಸಂಸ್ಖರತಿ ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ಉತ್ತಮ ಕಾರ್ಯ ಎಂದರು ಹೇಳಿದರು. ಚಿಣ್ಣಪ್ಪ ಅವರು ಭಗವಂತನ ಹಾಡನ್ನು ಕೂಡ ರಚಿಸಿದ್ದು, ಅದನ್ನು ನಾವು ಹಾಡಬೇಕು. ಈ ಕೊಡಗಿನ ಮಣ್ಣಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಬೇಕಾದರೆ ಪಟ್ಟೋಲೆ ಪಳಮೆ ಓದಬೇಕು. ಇದರಿಂದ ಕೊಡಗಿನಲ್ಲಿ ಹುಟ್ಟುವ ಭಾಗ್ಯ ಲಭಿಸುತ್ತದೆ ಎಂದರಲ್ಲದೆ ಕೊಡವರ ಪದ್ದತಿಯಂತೆ ಚಾವು ಪಾಟ್ ಇದೆ. ಅದನ್ನು ಈಗ ಹಾಡುವುದು ಎಲ್ಲೂ ಕಂಡುಬರುತ್ತಿಲ್ಲ. ಹೀಗೆ ನಮ್ಮ ಎಲ್ಲ ಆಚಾರ ವಿಚಾರಗಳು ಹಳಿ ತಪ್ಪಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ “ನನ್ನ ವಿನೋದಕ್ಕಾಗಿ ಕೊಡಗು ಪದಗಳನ್ನು ಒದಗಿಸುತ್ತಾ ಇದ್ದು ಕೆಲವು ಮಟ್ಟಿಗೆ ಹಾಡುಗಳು ದೊರೆತ ನಂತರ ಕೊಡವರ ಪದ್ಧತಿಗಳನ್ನು ಬರೆಯತೊಡಗಿದೆ” ಎಂದು ಪಟ್ಟೋಲೆ ಪಳಮೆ ಗ್ರಂಥದ ರಚನೆಯ ಹಿನ್ನೆಲೆಯನ್ನು ಕುರಿತು ಸರಳವಾಗಿ ಚಿಣ್ಣಪ್ಪನವರು ಹೇಳಿಕೊಂಡಿದ್ದಾರೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಒಂದು ವಿಶಿಷ್ಟ ಜನಾಂಗದ ಜಾನಪದದ ವಿವಿಧ ಪ್ರಕಾರಗಳನ್ನು ತಾವೊಬ್ಬರೇ ಜಾನಪದ ವಿದ್ವಾಂಸನಾಗಿ ಸಂಗ್ರಹಿಸುತ್ತಿರುವರೆಂಬುದರ ಕಲ್ಪನೆಯೇ ಇಲ್ಲದೆ, ಕನ್ನಡ ಜಾನಪದ ಸಾಹಿತ್ಯ ಸಂಗ್ರಹವೆಂಬ ಸೌಧದ ಮೊತ್ತಮೊದಲ ಅಡಿಗಲ್ಲನ್ನು ಹಾಕಿದ ಶ್ರೀಯುತರ ಸಾಹಿತ್ಯ ಸೇವೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಇವರನ್ನು ಜಾನಪದ ಬ್ರಹ್ಮ ಎಂದು ಕರೆಯುವುದರಲ್ಲಿ ತಪ್ಪಿಲ್ಲ. ಕೊಡವಾಮೆ ಉಳಿಸಿ ಬೆಳೆಸಬೇಕು. ಅದರ ರಕ್ಷಣೆ ಆಗಬೇಕು ಎಂದರು. ಅಖಿಲ ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣೂ ಅಪ್ಪಣ್ಣ, ಮಾತನಾಡಿ ನಡಿಕೇರಿಯಂಡ ಚಿಣ್ಣಪ್ಪನವರು ಕನ್ನಡ ಜಾನಪದ ಸಂಗ್ರಹಗಳ ಕೃತಿಗಳಲ್ಲೇ ಆಚಾರ್ಯ ಕೃತಿಯೆಂದು ಪರಿಗಣಿಸಲಾಗಿರುವ ಪಟ್ಟೋಲೆ ಪಳಮೆಯ ಸಂಗ್ರಾಹಕರು. ಚಿಣ್ಣಪ್ಪನವರು ಕೊಡಗಿನಾದ್ಯಂತ ಸಂಚರಿಸಿ ಕೊಡವರ ಜನಪದ ಸಾಹಿತ್ಯವನ್ನು ಕುರಿತು ಹಲವು ಹಿರಿಯರಿಂದ, ಹಾಡುಗಾರರಿಂದ ಮಾಹಿತಿಗಳನ್ನು ಸಂಗ್ರಹಿಸಿ ಪಟ್ಟೋಲೆ ಪಳಮೆಯನ್ನು ಬರೆದರು. ಅಂದಿನ ಕಮಿಶನರ್ ಸಿ ಎಸ್ ಸೂಟರ್ ಅವರ ಸಹಾಯದಿಂದ ಸರ್ಕಾರದ ವತಿಯಿಂದ ತಮ್ಮ ಗ್ರಂಥವನ್ನು ಪ್ರಕಟಿಸಿದರು. ಬಳಿಕ 1929ರಲ್ಲಿ ಭಗವದ್ಗೀತೆಯನ್ನು ಕೊಡವ ಜಾನಪದ ಗೀತೆಯ ರೂಪದಲ್ಲಿ ಭಗವಂತಂಡ ಪಾಟ್ಟ್ ಎಂಬ ಶೀರ್ಷಿಕೆಯಲ್ಲಿ ರಚಿಸಿ ಪ್ರಕಟಿಸಿದರು. ಮೇಲ್ಮಟ್ಟದ ಮೂಲ ನಿವಾಸಿಗಳ ಸಂಸ್ಕøತಿ ಮೂಲೆಗುಂಪಾಗುವಾಗ ಇವರು ಈ ಗ್ರಂಥ ರಚಿಸಿದ್ದಾರೆ. ಇದೊಂದು ಸಂಶೋಧನಾ ಗ್ರಂಥ ಎಂದರು. ಪದ್ಮಶ್ರೀ ಪುರಸ್ಕøತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ ಕೊಡವರು ತಮ್ಮ ಆಚಾರ, ವಿಚಾರ, ಪದ್ದತಿ ಪರಂಪರೆಗಳನ್ನು ಮರೆಯಬಾರದು. ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕøತಿಯ ಪಾಠ ಹೇಳಿಕೊಡಬೇಕು. ಕೊಡಗು, ಕೊಡವ ಎಂದರೆ ಜಗತ್ತಿನ ಯಾವ ಮೂಲೆಗೆ ಹೋದರೂ ಗೌರವ ಸಿಗುತ್ತದೆ. ಈ ನಾಡಿನಲ್ಲಿ ಜನಿಸಿದ ನಾವು ಜಾನಪದ ಸಂಸ್ಕøತಿಯ ನೆಲೆಗಟ್ಟಿನಲ್ಲಿ ಕೊಡವಾಮೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಕೊಡಗಿನ ಹಿರಿಮೆಯನ್ನು ಸಾರುವಂತಾಗಬೇಕೆಂದರು. ಸರ್ಕಂಡ ಸೋಮಯ್ಯ ಮಾತನಾಡಿ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನಾವೇ ಧನ್ಯರು, ಆ ಕಾಲಘಟ್ಟದಲ್ಲಿ ಪಟ್ಟೋಲೆ ಪಳಮೆ ಬರೆದ ಅವರಲ್ಲಿ ಅಪಾರವಾದ ಜ್ಞಾನ ಭಂಡಾರವೇ ಅಡಗಿತ್ತು. ಈ ಗ್ರಂಥವನ್ನು ಪ್ರತಿಯೊಬ್ಬರೂ ಓದಬೇಕು ಎಂದರು. ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಕೊಡವ ಭಾಷಿಕ ಸಮಾಜ ಒಕ್ಕೂಟ ಅಧ್ಯಕ್ಷ ಮೇಚಿರ ಸುಭಾಶ್ ನಾಣಯ್ಯ, ನಡಿಕೇರಿಯಂಡ ಒಕ್ಕ ಅಧ್ಯಕ್ಷ ನಡಿಕೇರಿಯಂಡ ಕಿಶೋರ್ ತಿಮ್ಮಯ್ಯ ಮಾತನಾಡಿದರು. ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಟೋಲೆ ಪಳಮೆ ದಕ್ಷಿಣ ಭಾರತದ ಮೊದಲ ಗ್ರಂಥವಾಗಿದ್ದು ಕಳೆದ 1924ರಲ್ಲಿ ರಚನೆಗೊಂಡ ಪಟ್ಟೋಲೆ ಪಳಮೆ ಅದರ ಉತ್ತಮ ಹಿರಿಮೆಯನ್ನಾಧರಿಸಿ 7 ಮರು ಮುದ್ರಣವನ್ನು ಹೊಂದಿದೆ. ಈ ಕೃತಿ ಕೊಡವ ಭಾಷೆ, ಸಂಸ್ಕøತಿಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡವ ಭಾಷೆಯನ್ನು ಮಾತನಾಡುವ ಎಲ್ಲರೂ ಇದನ್ನು ಭಗವದ್ಗೀತೆಗೆ ಸಮನಾಗಿಸಿದ್ದಾರೆ ಎಂದು ಹೇಳಿದರು. ಪಟ್ಟೋಲೆ ಪಳಮೆ ಕೊಡವ ಭಾಷೆ ಪದ್ಧತಿ ಸಂಸ್ಕøತಿ ಪರಂಪರೆಯ ಹಿಂದಿನ ಪಾವಿತ್ರ್ಯತೆಯ ಕೃತಿಯಾಗಿದ್ದು ಇದನ್ನು ಪ್ರತಿಯೊಬ್ಬರಿಗೆ ಅರಿವು ಮೂಡಿಸಿ ಶಾಶ್ವತವಾಗಿ ಉಳಿಸಲು ಇಂದಿನ ಯುವ ಜನಾಂಗ ಎಲ್ಲ ರೀತಿಯಿಂದಲೂ ಶ್ರಮಿಸಬೇಕು. ಕೊಡವ ಭಾಷೆಯಲ್ಲಿ ರಚನೆಯಾದ ಪಟ್ಟೋಲೆ ಪಳಮೆ ಕೃತಿ ಕೊಡಗಿನಲ್ಲಿ ಶಾಶ್ವತವಾಗಿ ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ನಮ್ಮ ಆಚಾರ ವಿಚಾರ, ಪದ್ದತಿ ಪರಂಪರೆಗೆ ದಕ್ಕೆ ಬರುವಂತಹ ಸಂದರ್ಭದಲ್ಲಿ ಕೊಡವಾಮೆಯ ಉಳಿವಿಗಾಗಿ ನಡಿಕೇರಿಯಂಡ ಚಿಣ್ಣಪ್ಪ ಅವರು ಎಲ್ಲ ಕಡೆ ಸುತ್ತುತ್ತಾ ಪದ್ದತಿ ಪರಂಪರೆಗಳನ್ನು ಅರಿತು ಅದನ್ನು ಪುಸ್ತಕ ರೂಪದಲ್ಲಿ ದಾಖಲಾಗುವಂತೆ ಮಾಡಿದ್ದಾರೆ. ಅಂದಿನ ಕಾಲದಲ್ಲಿ ಜನಪದದ ನೆಲೆಗಟ್ಟಿನಲ್ಲಿ ಕೊಡವರಿಗೆ ಇದು ಭಗವದ್ಗೀತೆ ರೂಪದಲ್ಲಿ ದೊರೆತ ಗ್ರಂಥವಾಗಿದ್ದು ಅವರನ್ನು ಜಾನಪದ ಬ್ರಹ್ಮ ಎಂದೆ ಕರೆಯಲಾಗುತ್ತದೆ ಎಂದು ಹೇಳಿದರಲ್ಲದೆ ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ವರ್ಷಾಚರಣೆಯ ಅಂಗವಾಗಿ ರಾಜ್ಯಮಟ್ಟದ ಬೃಹತ್ ಜಾನಪದ ನಮ್ಮೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರಮುಖರನ್ನು ಸೇರಿಸಿ ಆಯೋಜಿಸಲಾಗುತ್ತದೆ. ಕನ್ನಡ ಸಂಸೃತಿ ಇಲಾಖೆ ವತಿಯಿಂದ ಇವರ ಜನ್ಮದಿನಾಚರಣೆ ಆಚರಿಸುವಂತಾಗಬೇಕು ಎಂದರು. ಮುಕ್ಕಾಟಿರ ಸುಧಾ ಪೂಣಚ್ಚ, ಪುತ್ತಾಮನೆ ವಿದ್ಯಾ ಜಗದೀಶ್, ಮೊಣ್ಣಂಡ ಶೋಭಾ ಸುಬ್ಬಯ್ಯ, ಪೋಡಮಾಡ ಭವಾನಿ ನಾಣಯ್ಯ ಕೊಡವ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕೊಡಗಿನ ಮೂಲೆ ಮೂಲೆಗಳಿಂದ ಆಗಮಿಸಿದ ವಿವಿಧ ಕೊಡವ ಸಮಾಜಗಳ ಪ್ರಮುಖರು, ಸಂಘಟನೆಗಳ ಪದಾಧಿಕಾರಿಗಳು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಭಾಷಿಕ ಜನಾಂಗ ಭಾಂಧವರು ಸೇರಿದಂತೆ ಕೊಡವಾಮೇರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕೊಡಗಿನ ಎಲ್ಲಾ ಕೊಡವ ಸಮಾಜಗಳ ಪ್ರಮುಖರು, ಹೊರ ಜಿಲ್ಲೆಗಳಲ್ಲಿರುವ ಕೊಡವ ಸಮಾಜಗಳು, ಕೊಡಗಿನಲ್ಲಿರುವ ವಿವಿಧ ಕೊಡವ ಸಂಘಟನೆಗಳು, ಕೊಡವ ಕೇರಿಗಳು, ಪೊಮ್ಮಕ್ಕಡ ಕೂಟಗಳು, ಕೊಡಗಿನಲ್ಲಿರುವ ಕೊಡವ ಭಾಷಿಕ ಜನಾಂಗಗಳು, ಮತ್ತು ಕೊಡವಾಮೆಯ ಉಳಿವಿಕೆಗಾಗಿ ಶ್ರಮಿಸುತ್ತಿರುವ ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳ ಪ್ರಮುಖರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಂತಾಪ :: ಮುಕ್ಕಾಟಿರ ಶಿವು ಮಾದಪ್ಪ, ಸಿನಿಮಾ ನಿರ್ದೇಶಕ ಆಪಾಡಂಡ ಟಿ. ರಘು ಅವರ ನಿಧನಕ್ಕೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.