






*ಮೈದಾನ 1*
ತೆಕ್ಕಡ ಮತ್ತು ಮಾಳೇಟಿರ (ಕುಕ್ಲೂರು) ನಡುವಿನ ಪಂದ್ಯದಲ್ಲಿ ತಲಾ 1 ಗೋಲು ಸಮಬಲವಾದ ಕಾರಣ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಮಾಳೇಟಿರ ತಂಡ ಜಯ ದಾಖಲಿಸಿತು. ಮಾಳೇಟಿರ ತಂಡದ ಪರ ಸೋಮಣ್ಣ ಹಾಗೂ ತೆಕ್ಕಡ ತಂಡದ ಪರ ಸೋಮಣ್ಣ ತಲಾ 1 ಗೋಲು ದಾಖಲಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತೆಕ್ಕಡ ಸೋಮಣ್ಣ ಪಡೆದರು. ಬಲ್ಲಚಂಡ ಮತ್ತು ಕಾವಾಡಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಲ್ಲಚಂಡ ತಂಡ ಗೆಲುವು ಸಾಧಿಸಿತು. ಬಲ್ಲಚಂಡ ಪರ ನಾಣಯ್ಯ ಹಾಗೂ ಸಜನ್ ತಲಾ 2 ಗೋಲು ಅದ್ವಯಿತ್ 1 ಗೋಲು ದಾಖಲಿಸಿದರು. ಕಾವಾಡಿಚಂಡ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೇಕೇರಿರ ಮತ್ತು ಕಡೇಮಾಡ ನಡುವಿನ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಮೇಕೇರಿರ ತಂಡ ಗೆಲುವು ದಾಖಲಿಸಿತು. ಮೇಕೇರಿರ ಪರ ನಿತಿನ್ ತಿಮ್ಮಯ್ಯ ಹಾಗೂ ಶೈನಾ ತಂಗಮ್ಮ ತಲಾ 2 ಹಾಗೂ ಅಭಿನ ಗಣಪತಿ 1 ಗೋಲು ದಾಖಲಿಸಿದರು. ಕಡೇಮಾಡ ಪರ ರಚನ್ ಚರ್ಮಣ್ಣ 2 ಗೋಲು ಬಾರಿಸಿದರು. ಕಡೇಮಾಡ ಬಿಪಿನ್ ಮುತ್ತಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನಂಬುಡಮಾಡ ಮತ್ತು ಉಳ್ಳಿಯಡ ನಡುವಿನ ಪಂದ್ಯದಲ್ಲಿ ವಾಕ್ ಓವರ್ ನಲ್ಲಿ ನಂಬುಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಲ್ಲಡಿಚಂಡ ಮತ್ತು ಚೊಟ್ಟೆಯಂಡಮಾಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೊಟ್ಟೆಯಂಡಮಾಡ ತಂಡ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ತಂಡದ ಪರ ಗೌರವ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಮೋಹಿತ್ 1 ಗೋಲು ಬಾರಿಸಿದರು. ಬಲ್ಲಡಿಚಂಡ ಸುಬ್ರಮಣಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಯ್ಯನೆರವಂಡ ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ತೋರಿದ ಕಾರಣ ನಂತರ ನಡೆದ ಟೈಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಅಯ್ಯನೆರವಂಡ ಜಯ ಸಾಧಿಸಿತು. ತೀತರಮಾಡ ತನುಷ್ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಅಲ್ಲಪಂಡ ಮತ್ತು ಪಟ್ಟಚೆರುವಂಡ ನಡುವಿನ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲವಾದ ಕಾರಣ ಟೈ ಬ್ರೇಕರ್‍ನಲ್ಲಿ ಅಲ್ಲಪಂಡ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಅಲ್ಲಪಂಡ ತಂಡದ ಪರ ಗಿರಿ ಚೆಂಗಪ್ಪ ಹಾಗೂ ಮಿಲನ್ ನಾಣಯ್ಯ ತಲಾ 1 ಗೋಲು ದಾಖಲಿಸಿದರು. ಪಟ್ಟಚೆರುವಂಡ ನಿತಿಶ್ ಸೋಮಯ್ಯ ಹಾಗೂ ಕಿಶು ಚರ್ಮಣ ತಲಾ 1 ಗೋಲುಬಾರಿಸಿದರು. ಪಟ್ಟಚೆರುವಂಡ ಜೀವನ್ ಮುದ್ದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಟ್ಟಡ ಮತ್ತು ಬಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಸಮಬಲದಿಂದಾಗಿ ನಡೆದ ಟೈ ಬ್ರೇಕರ್‍ನಲ್ಲಿ ಕೂಡ 3-3 ಸಮಬಲ ಎದುರಾಯಿತು. ನಂತರ ನಡೆದ ಸಡನ್ ಡೆತ್‍ನಲ್ಲಿ 2-1 ಗೋಲುಗಳ ಅಂತರದಲ್ಲಿ ಪಟ್ಟಡ ತಂಡ ಜಯ ಸಾಧಿಸಿತು. ಪಟ್ಟಡ ತಂಡದ ಪರ ಶರತ್ ಸೋಮಯ್ಯ ಹಾಗೂ ಬಿದ್ದಂಡ ಪರ ಭರತ್ ಚಂಗಪ್ಪ ತಲಾ 1 ಗೋಲು ದಾಖಲಿಸಿದರು. ಬಿದ್ದಂಡ ಭರತ್ ಚಂಗಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಟ್ಟಮಾಡ ಮತ್ತು ಕುಲ್ಲಚಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯ ಸಾಧಿಸಿತು. ಕುಲ್ಲಚಂಡ ಪರ ಮೋಕ್ಷ್ ಮಂದಣ್ಣ 2 ಹಾಗೂ ಜಾಯ್ ಕಾರ್ಯಪ್ಪ 1 ಗೋಲು ದಾಖಲಿಸಿದರು. ಪಟ್ಟಮಾಡ ಪರ ರಿನಿತ್ ಕಾರ್ಯಪ್ಪ 1 ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಪ್ರಶಸ್ತಿ ಪಡೆದರು. ಅಜ್ಜಿನಿಕಂಡ ಮತ್ತು ಬೊಳಿಯಾಂಡಿರ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡು ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ನಂತರ ನಡೆದ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಬೊಳಿಯಾಂಡಿರ ತಂಡ ವಿಜಯ ಸಾಧಿಸಿತು. ಅಜ್ಜಿನಿಕಂಡ ಕೇತನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಂಡಿರ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪೆಮ್ಮಂಡ ಜಯ ಸಾಧಿಸಿತು. ಪೆಮ್ಮಂಡ ಪರ ಕರಣ್ ಪೊನ್ನಪ್ಪ 2, ಸುಗಮ್ ಮಂದಣ್ಣ, ಸಹಾಸ್ ಸೋಮಣ್ಣ ಹಾಗೂ ಆದಿತ್ಯ ಪೆಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಕೊಂಡಿರ ಕೀರ್ತಿ ತಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 3*
ಕಂಬೆಯಂಡ ಮತ್ತು ಮಾಚಿಮಂಡ ನುಡವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಂಬೆಯಂಡ ತಂಡ ಗೆಲುವು ದಾಖಲಿಸಿತು. ಕಂಬೆಯಂಡ ತಂಡದ ಪರ ಕಾರ್ಯಪ್ಪ 1 ಗೋಲು ದಾಖಲಿಸಿದರು. ಮಾಚಿಮಂಡ ಆಶಿಕ್ ಉತ್ತಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೀಯಕಪೂವಂಡ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕಾಂಡಂಡ ಜಯ ಸಾಧಿಸಿತು. ಕಾಂಡಂಡ ಪರ ಅಪ್ಪಣ್ಣ ತಲಾ 2, ಚೆಂಗಪ್ಪ 1 ಗೋಲು ದಾಖಲಿಸಿದರು. ಚೀಯಕಪೂವಂಡ ರೋಹನ್ 2 ಗೋಲು ಬಾರಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೀರಿಯಂಡ ಮತ್ತು ನುಚ್ಚಿಮಣಿಯಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ನುಚ್ಚಿಮಣಿಯಂಡ ಗೆಲುವು ಸಾಧಿಸಿತು. ನುಚ್ಚಿಮಣಿಯಂಡ ಪರ ಬೋಪಣ್ಣ, ಯಶ್ವಿನ್ ಪೊನ್ನಪ್ಪ ಹಾಗೂ ಸೋಮಣ್ಣ ತಲಾ 1 ಗೋಲು ದಾಖಲಿಸಿದರು. ಚೀರಿಯಂಡ ಪರ ವಿಫುಲ್ ಉತ್ತಯ್ಯ ಹಾಗೂ ತನಿಶ್ ತಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಚೀರಿಯಂಡ ವಿಫುಲ್ ಉತ್ತಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಲ್ಲಂಡ ಮತ್ತು ಪಾಂಡಿರ (ಗಾಳಿಬೀಡು) ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮಲ್ಲಂಡ ತಂಡ ಜಯ ಸಾಧಿಸಿತು. ಮಲ್ಲಂಡ ಪರ ಉತ್ತಪ್ಪ, ಪೊನ್ನಪ್ಪ, ಸುಬ್ರಮಣಿ, ಪ್ರತನ್ ಹಾಗೂ ಮದನ್ ತಿಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಪಾಂಡಿರ ರಾಜ ಸುಬ್ರಮಣಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನಾಪನೆರವಂಡ ಮತ್ತು ಮಾಳೆಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮಾಳೆಯಂಡ ತಂಡ ಜಯ ಸಾಧಿಸಿತು. ಮಾಳೆಯಂಡ ಪರ ಅಪ್ಪಣ್ಣ 2 ಗೋಲು ದಾಖಲಿಸಿದರು. ನಾಪನೆರವಂಡ ಸೀತಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆಂಬಂಡ ಮತ್ತು ಮುಂಡಚಾಡಿರ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 6-5 ಗೋಲುಗಳ ಅಂತರದಲ್ಲಿ ಚೆಂಬಂಡ ತಂಡ ಜಯ ಸಾಧಿಸಿತು. ಮುಂಡಚಾಡಿರ ನಿಹಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.