






ಮಡಿಕೇರಿ ಏ.8 NEWS DESK : 2024–25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಶೇ 83.84 ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ ಕೊಡಗು ಜಿಲ್ಲೆ 4 ನೇ ಸ್ಥಾನ ಗಳಿಸಿದೆ. 2024 ರ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯು 5 ಸ್ಥಾನದಿಂದ 4 ನೇ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿ 4697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3938 ಮಂದಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಪರೀಕ್ಷೆಗೆ ಕುಳಿತಿದ್ದ 2,320 ಬಾಲಕರಲ್ಲಿ 1750 ಬಾಲಕರು ಉತ್ತೀರ್ಣರಾಗಿ 75.43 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆಗೆ ಕುಳಿತಿದ್ದ 2,748 ಬಾಲಕಿಯರಲ್ಲಿ 2,333 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.84.9 ರಷ್ಟು ಫಲಿತಾಂಶ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 786 ವಿದ್ಯಾರ್ಥಿಗಳ ಪೈಕಿ 516 (ಶೇ 65.65), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 2376 ವಿದ್ಯಾರ್ಥಿಗಳಲ್ಲಿ 2027 ಮಂದಿ (ಶೇ 85.31), ವಿಜ್ಞಾನ ವಿಭಾಗದಲ್ಲಿ 1535 ವಿದ್ಯಾರ್ಥಿಗಳ ಪೈಕಿ 1395 (ಶೇ 90.88) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 250 ಪೈಕಿ 121 (ಶೇ 48.40) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತಾ ಅಭ್ಯರ್ಥಿಗಳು 121 ಪೈಕಿ 24 (ಶೇ 19.83) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ : ಕಲಾ ವಿಭಾಗದಲ್ಲಿ ಮಡಿಕೇರಿ ಸಂತ ಜೊಸೇಫರ ಪಿಯು ಕಾಲೇಜಿನ ಅಫಿಯಾ ಶರೀಫ್ ಬಿ.ಎಂ., 572 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜಿನ ನವನಿಧನ್ ಎಂ.ಆರ್. 569(ದ್ವಿತೀಯ), ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಸಾಜೀಧಾ 569 (ದ್ವಿತೀಯ), ಮದೆ ಮಹೇಶ್ವರ ಪಿಯು ಕಾಲೇಜಿನ ಮೇಘಶ್ರೀ ಕೆ. 568(ತೃತೀಯ) ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಸಂಯುಕ್ತ ಪಿಯು ಕಾಲೇಜಿನ ಡಿಂಪಲ್ ತಮ್ಮಯ್ಯ ಸಿ.ಎಂ. 591 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಗೋಣಿಕೊಪ್ಪ ವಿದ್ಯಾನಿಕೇತನ್ ಪಿಯು ಕಾಲೇಜಿನ ಶಿವಾನಿ ಕೆ.ಎಸ್. 590 (ದ್ವಿತೀಯ), ಗೋಣಿಕೊಪ್ಪ ವಿದ್ಯಾನಿಕೇತನ್ ಪಿಯು ಕಾಲೇಜಿನ ನೀಕ್ಷಾ ವಿ.ಎಸ್. 587(ತೃತೀಯ), ಸುಂಟಿಕೊಪ್ಪ ಸಂತ ಮೇರಿ ಸಂಯುಕ್ತ ಪಿಯು ಕಾಲೇಜಿನ ಸೃಜನ ಡಿ.ಡಿ 587 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ್ ಪಿಯು ಕಾಲೇಜಿನ ವೈಷ್ಣವಿ ಟಿ.ವಿ. 588 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಪೊನ್ನಂಪೇಟೆಯ ಕೂರ್ಗ್ ಪಿಯು ಕಾಲೇಜಿನ ಎ.ಆರ್.ಪನ್ಯಪೊನ್ನಮ್ಮ 586(ದ್ವಿತೀಯ), ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಪಿಯು ಕಾಲೇಜಿನ ಲಿಜೋ ಜೆಮ್ಸ್ 583(ತೃತೀಯ), ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಪಿಯು ಕಾಲೇಜಿನ ಮಮತ ಎಂ.ಪಿ. 583(ತೃತೀಯ), ಗೋಣಿಕೊಪ್ಪ ವಿದ್ಯಾನಿಕೇತನ್ ಪಿಯು ಕಾಲೇಜಿನ ಸಾನಿಕ ಜಸ್ಮಿನ್ ಪಿ. 583 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಮಂಜುಳ ತಿಳಿಸಿದ್ದಾರೆ.