






ಮಡಿಕೇರಿ ಏ.8 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸಿಸನ್-2 ಎಂಟನೇ ದಿನದ ಪಂದ್ಯಾವಳಿಯಲ್ಲಿ ಟೀಮ್ ಕೊಡವ ರೈಸಿಂಗ್ ಸ್ಟಾರ‍್ಸ್ ಮತ್ತು ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ಗೆಲುವು ಸಾಧಿಸಿತು. ಟೀಮ್ ಕೊಡವ ವಾರಿಯರ್ಸ್ ಮತ್ತು ಟೀಮ್ ಕೊಡವ ರೈಸಿಂಗ್ ಸ್ಟಾರ‍್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಕೊಡವ ವಾರಿಯರ್ಸ್ ತಂಡ 18 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 54 ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. ಇದನ್ನು ಬೆನ್ನಟ್ಟಿದ ಟೀಮ್ ಕೊಡವ ರೈಸಿಂಗ್ ಸ್ಟಾರ‍್ಸ್ ತಂಡ 8.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ೫೫ ರನ್‌ಗಳನ್ನು ಬಾರಿಸಿ ಗೆಲುವಿನ ನಗು ಬೀರಿತು. ಟೀಂ ಕೊಡವ ರೈಸಿಂಗ್ ಸ್ಟಾರ‍್ಸ್ ತಂಡದ ನೆರವಂಡ ವರುಣ್ ಅಯ್ಯಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಟೀಮ್ ವೈಲ್ಡ್ ಫ್ಲವರ್ ಮತ್ತು ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ವೈಲ್ಡ್ ಫ್ಲವರ್ 17.3 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ108 ರನ್‌ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ 9.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 114 ರನ್ ಸೇರಿಸಿ ಗೆಲುವು ದಾಖಲಿಸಿತು. ವೆಸ್ಟರ್ನ್ ಘಾಟ್ ವಾರಿಯರ್ಸ್‌ನ ಕನ್ನಂಡ ಅಂಕುಶ್ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.