ಮಡಿಕೇರಿ NEWS DESK ಏ.8 : ಸಾರ್ವಜನಿಕರಲ್ಲಿ ಮನವಿ…
ನಾಳೆ ದಿನ ಅಂದರೇ ದಿನಾಂಕ 09- 04-2025 ರಂದು ಬೆಳಿಗ್ಗೆ 10.30 ಗಂಟೆಯಿಂದ ಮದ್ಯಾಹ್ನ 01.00 ಗಂಟೆಯ ವರೆಗೆ ಬಿಜೆಪಿ ಪಕ್ಷದ ವತಿಯಿಂದ ಮಡಿಕೇರಿಯ ಚೌಡೇಶ್ವರಿ ದೇವಾಲಯದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೆ ಪ್ರತಿಭಟನ ಮೆರವಣಿಗೆ ಹಮ್ಮಿಕೊಂಡಿದ್ದು, ಈ ಸಂಬಂಧ ಸುಗಮ ಸಂಚಾರಕ್ಕೆ ಅನವು ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ಚೌಡೇಶ್ವರಿ ದೇವಾಲಯದಿಂದ ಐ ಜಿ ( ಚೌಕಿ ) ವೃತ್ತದ ವರೆಗೆ ರಸ್ತೆಯ ಎರೆಡು ಬದಿಯಲ್ಲೂ ವಾಹನ ಪಾರ್ಕಿಂಗ್ ನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹಾಗೂ ಗಣಪತಿ ಬೀದಿಯ ರಸ್ತೆಯಲ್ಲಿ ಕಡ್ಡಾಯವಾಗಿ ರಸ್ತೆಯ ಒಂದು ಭಾಗದಲ್ಲಿ ( ಎಡ ಭಾಗದಲ್ಲಿ ) ಪಾರ್ಕಿಂಗ್ ಮಾಡುವಂತೆ ಸಾರ್ವಜನಿಕರಲ್ಲಿ ಈ ಮೂಲಕ ವಿನಂತಿಸುತ್ತಿದ್ದೇವೆ.
ಸಂಚಾರಿ ಪೊಲೀಸ್ ಠಾಣೆ
ಮಡಿಕೇರಿ.