





ಮಡಿಕೇರಿ NEWS DESK ಏ.9 : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‌ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‌ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಸಿಕೊಡಬೇಕೆಂದು ಒತ್ತಾಯಿಸಿದರು. ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ 1871-72ರಿಂದ 1931ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು. ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು. ಮೂವರು ಪ್ರಭಾವಿ ರಾಜಕಾರಣಿಗಳು ಸುಳ್ಯದಲ್ಲಿನ ತಮ್ಮ ಭದ್ರಕೋಟೆಯನ್ನು ಕೊಡವಲ್ಯಾಂಡ್‌ನೊಂದಿಗೆ ವಿಲೀನಗೊಳಿಸುವ ಒಳಸಂಚು ರೂಪಿಸಿದ್ದು, ಈ ಪ್ರಯತ್ನದಿಂದಾಗಿ ಸಂಸತ್ ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ಆರೋಪಿಸಿದರು. ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಂತೆ ಸೇನೆಗೆ ಸೇರುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಕೊಡವರು ಕಾಪಾಡುತ್ತಿದ್ದಾರೆ. ಕಟ್ಟುನಿಟ್ಟಾದ ಕುಟುಂಬ ಯೋಜನೆಯ ಪಾಲನೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡವರು ಮಹತ್ವದ ಪಾತ್ರ ವಹಿಸಿದ್ದಾರೆ. ಆದಿಮಸಂಜಾತ ಕೊಡವ ಸಮುದಾಯ ನೀಡಿರುವ ಮತ್ತು ನೀಡುತ್ತಿರುವ ವಿಶಿಷ್ಟ ಕೊಡುಗೆಗಳನ್ನು ಸರ್ಕಾರ ಪರಿಗಣಿಸಬೇಕು. ವಿಶೇಷವಾಗಿ ಅತೀ ಸಣ್ಣ ಕೊಡವ ಜನಾಂಗದ ವಿಚಾರದಲ್ಲಿ ಜನಸಂಖ್ಯೆಯು ಕ್ಷೇತ್ರ ಮರುವಿಂಗಡಣೆಗೆ ಏಕೈಕ ಮಾನದಂಡವಾಗಿರಬಾರದು ಎಂದರು. ಕೊಡವ ಸಮುದಾಯ ಕೊಡವಲ್ಯಾಂಡ್ ಗೆ ಸೀಮಿತವಾದ ಒಂದು ವಿಶಿಷ್ಟ ಜನಾಂಗವಾಗಿದೆ. ಕೊಡವಲ್ಯಾಂಡ್ ಕೊಡವರ ಸಾಂಪ್ರದಾಯಿಕ ಮತ್ತು ಪೂರ್ವಜರ ತಾಯ್ನಾಡಾಗಿದೆ. ಕಾಶ್ಮೀರಿ ಪಂಡಿತರು, ರೆಡ್ ಇಂಡಿಯನ್ನರು, ಟಿಬೆಟಿಯನ್ ಬೂತಿಯಾಗಳು, ಸ್ಕಾಟಿಷ್ ಜನಾಂಗ, ಸೆಲ್ಟಿಕ್ ಜನಾಂಗ ಮತ್ತು ಕುರ್ದಿಶ್ ಜನರಿಗೆ ಸಮನಾಂತರವಾದ ಆದಿಮಸಂಜಾತ ಜನಾಂಗಕ್ಕೆ ಸೇರಿದ ಕೊಡವರಿಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ನೀಡುವ ಅನಿವಾರ್ಯತೆ ಇದೆ. ಭಾರತೀಯ ಸಂವಿಧಾನದ 6 ಮತ್ತು 8 ನೇ ಶೆಡ್ಯೂಲ್ ಪಟ್ಟಿಗಳೊಂದಿಗೆ ವಿಧಿ 244 ಮತ್ತು 371ನೇ ವಿಧಿ ಬುಡಕಟ್ಟು ಪ್ರದೇಶಗಳ ಆಡಳಿತ ಹಾಗೂ ಭಾಷೆಗಳ ಗುರುತಿಸುವಿಕೆಯನ್ನು ಕ್ರಮವಾಗಿ ಒದಗಿಸುತ್ತದೆ. 1871-72 ರಿಂದ 1931 ರವರೆಗಿನ ಬ್ರಿಟಿಷ್ ಸರ್ಕಾರದ ಅವಧಿಯ ಜನಗಣತಿ ಕಾರ್ಯಾಚರಣೆಗಳು ಕೊಡವರನ್ನು ಪ್ರತ್ಯೇಕ ಜನಾಂಗ ಮತ್ತು ಸಮುದಾಯವೆಂದು ಗುರುತಿಸಿ ಕೂರ್ಗಿಸ್ ಅಥವಾ ಕೊಡವರು ಎಂದೂ ಕರೆಯಲಾಯಿತು. ಇದು ನಾಲ್ಕು ವರ್ಣಗಳ ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ಸಂಬಂಧಗಳಿಂದ ಭಿನ್ನವಾಗಿದೆ. 1941 ರಿಂದ ಜನಗಣತಿ ನಡೆಸಿದವರು ಕೊಡವರನ್ನು ಅಸ್ತಿತ್ವವಲ್ಲದ ಘಟಕವಾಗಿ ದಾಖಲಿಸಲು ಪ್ರಾರಂಭಿಸಿದವು. ಅವರ ಸ್ಥಾನಮಾನವನ್ನು ಒಂದು ಅನನ್ಯ ಮತ್ತು ಸ್ವತಂತ್ರ ಸಮುದಾಯಕ್ಕಿಂತ ಕೇವಲ ಜಾತಿಗೆ ಇಳಿಸಿದವು. ಈ ತಪ್ಪು ನಿರೂಪಣೆ 2011 ರ ಜನಗಣತಿಯವರೆಗೂ ಮುಂದುವರೆದಿದ್ದು, ಕೊಡವ ಸಮುದಾಯದ ಗುರುತು, ಸಂಸ್ಕೃತಿ ಮತ್ತು ಭವಿಷ್ಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ. ಜನಸಂಖ್ಯಾ ವಿಜ್ಞಾನದ ಮತ್ತು ಮಾನವ ಶಾಸ್ತ್ರದ ಜಾಗತಿಕ ನಕ್ಷೆಯಿಂದ ಆದಿಮಸಂಜಾತ ಕೊಡವ ಜನಾಂಗವನ್ನು ಅಳಿಸಿ ಹಾಕಿದ ಕ್ರಮವನ್ನು ಜನಾಂಗೀಯ ನರಮೇಧ, ಜನಾಂಗೀಯ ಶುದ್ಧೀಕರಣ ಮತ್ತು ನಿರ್ನಾಮದ ಒಂದು ರೂಪವೆಂದು ಪರಿಗಣಿಸುತ್ತದೆ. ಇದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮಾವೇಶದ ತತ್ವಗಳನ್ನು ಉಲ್ಲಂಘಿಸುವ ಅಮಾನವೀಯ, ಸಂವಿಧಾನಬಾಹಿರ ಮತ್ತು ಅನ್ಯಾಯದ ಕೃತ್ಯವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ವಿಶಿಷ್ಟ ಜನಾಂಗೀಯ ಗುಂಪಾದ ಕೊಡವರ ಸೂಕ್ತ ಸ್ಥಾನವನ್ನು ಕಸಿದುಕೊಂಡ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕು. ಕೊಡವರನ್ನು ಮೂಲ ವಂಶಸ್ಥ ಕೊಡವ ಸಮುದಾಯಕ್ಕೆ ಸೀಮಿತಗೊಳಿಸಿದ ಏಕ ಮತ್ತು ವಿಭಿನ್ನ ಜನಾಂಗೀಯ ಗುಂಪು ಎಂದು ಗುರುತಿಸಬೇಕು. ಕೊಡವರಿಗೆ ಸಂಬಂಧಿಸಿದಂತೆ ಜಾತಿಯ ಯಾವುದೇ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಕೊಡವ ಜನಾಂಗವು ಒಂದೇ ಜನಾಂಗ. ಕೊಡವ ಸಮುದಾಯದಲ್ಲಿ ಯಾವುದೇ ಷರತ್ತು, ಉಪ-ಷರತ್ತು, ಉಪ-ಪಂಗಡ ಅಥವಾ ಉಪ-ಜಾತಿ ಇಲ್ಲ. ನಾವು ಕೊಡವ ಜನಾಂಗದವರು ಮತ್ತು ನಮ್ಮ ತಾಯಿ ಬೇರುಗಳು ಕೊಡವಲ್ಯಾಂಡ್‌ಗೆ ಮಾತ್ರ ಸೀಮಿತವಾಗಿವೆ. ಕೊಡವಲ್ಯಾಂಡ್‌ನ ಹೊರಗೆ, ನಮ್ಮ ಯಾವುದೇ ಸಾಂಸ್ಕೃತಿಕ ಬೇರುಗಳಿಲ್ಲ. ಪ್ರಾಚೀನ ಕಾಲದಿಂದ ಇಂದಿನವರೆಗೆ, ನಾವು ಒಂದು ಜನಾಂಗವಾಗಿ ನಮ್ಮ ವಿಶಿಷ್ಟ ಗುರುತನ್ನು ಉಳಿಸಿಕೊಂಡಿದ್ದೇವೆ. ಕೊಡವರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, 1941-2011 ರ ಜನಗಣತಿ ಎಣಿಕೆಗಳನ್ನು ರದ್ದುಗೊಳಿಸಲು ಮತ್ತು 1871-72 ರಿಂದ 1931 ರ ಜನಗಣತಿ ಎಣಿಕೆಗಳಲ್ಲಿ ಪ್ರತಿಫಲಿಸಿದಂತೆ ಕೊಡವ ಸಮುದಾಯದ ಅಧಿಕೃತ ಪ್ರಾತಿನಿಧ್ಯವನ್ನು ಪುನಃಸ್ಥಾಪಿಸಲು ಸಿಎನ್‌ಸಿ ಒತ್ತಾಯಿಸುತ್ತದೆ ಎಂದರು. ಕೊಡವರನ್ನು ವಿಶಿಷ್ಟ ಜನಾಂಗವೆAದು ಗುರುತಿಸಬೇಕು, ಜನಗಣತಿ ವರ್ಗೀಕರಣದ ತಿದ್ದುಪಡಿಯಾಗಬೇಕು ಮತ್ತು ಕೊಡವರನ್ನು ಜಾತಿ ಎಂದು ತಪ್ಪಾಗಿ ದಾಖಲಿಸಬಾರದು. ವಿಶ್ವಸಂಸ್ಥೆಯ ಆದಿಮಸಂಜಾತ ಹಕ್ಕುಗಳ ಅಡಿಯಲ್ಲಿ ಮಾನ್ಯತೆ ನೀಡಬೇಕು. ಇತಿಹಾಸದುದ್ದಕ್ಕೂ ಹೊರಗಿನ ಆಡಳಿತಗಾರರು ವಶಪಡಿಸಿಕೊಂಡಿದ್ದ ಕೊಡವರ ಪ್ರಾಚೀನ ಮತ್ತು ಪಾರಂಪರಿಕ ಭೂಮಿಯನ್ನು ಮರುಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದರು. ಭಾಗವಹಿಸಿದವರೆಲ್ಲರೂ ಸಿಎನ್‌ಸಿಯೊಂದಿಗೆ ಸಮರ್ಪಿಸಿಕೊಳ್ಳುವ ದೀಕ್ಷೆಯನ್ನು ಸೂರ್ಯ-ಚಂದ್ರ, ಗುರು-ಕಾರೋಣ, ಜಲ ದೇವತೆ ಕಾವೇರಿ, ಪವಿತ್ರ ಭೂ ದೇವಿ, ಕೊಡವರ ಧಾರ್ಮಿಕ ಸಂಸ್ಕಾರ ತೋಕ್, ಭಾರತದ ಘನವೆತ್ತ ಸಂವಿಧಾನ ಮತ್ತು ಪರ್ವತ ದೇವಿ ಮಲೆತಂಬ್ರಾನ್ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯಕ್ರಮವು ರಾಷ್ಟç ಗೀತೆ ಜನ-ಗಣ-ಮನ ದೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಪಟ್ಟಚೆರುವಂಡ ಸ್ವಪ್ನ, ಕುಮಾರಿ ಪಟ್ಟಚೆರುವಂಡ ಪ್ರಗತಿ ಪೊನ್ನಣ್ಣ, ಕೋಡಿರ ದಿನಾ ಪೊನ್ನಮ್ಮ. ಸರ್ವಶ್ರೀ ಪಾಂಡಂಡ ಕಿಟ್ಟು, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕೋಡಿರ ವಿನೋದ್ ನಾಣಯ್ಯ, ನೆರ್ಪಂಡ ಹರ್ಷ, ನೆರ್ಪಂಡ ಜಿಮ್ಮಿ, ಉದಿಯಂಡ ಚಂಗಪ್ಪ, ಸೊಮೆಯಂಡ ರೇಷ ತಮ್ಮಯ್ಯ, ಬಲ್ಲಚಂಡ ರವಿ, ಪಾಂಡಂಡ ಸುಧೀರ್, ಕೋಡಿರ ಪೂಕುಞ, ಚೋಳಂಡ ವಿಜಯ, ಪಾಲಚಂಡ ಪ್ರಶು, ಕುಲ್ಲಚಂಡ ಹರ್ಷ, ಕುಲ್ಲಚಂಡ ಸುಧಾ, ಕುಯಿಮಂಡ ಉತ್ತಯ್ಯ, ನೆರ್ಪಂಡ ಅಯ್ಯಣ್ಣ, ಬಲ್ಲಚಂಡ ಅಪ್ಪಚ್ಚು, ಬಲ್ಲಚಂಡ ಪೂಕುಞ, ಕೂತಂಡ ನವೀನ, ನಡಿಕೇರಿಯಂಡ ಜೀವನ್, ಬೇಪಡಿಯಂಡ ಶಾಂತು, ನೆರ್ಪಂಡ ಪೊನ್ನಣ್ಣ, ಬಲ್ಲಚಂಡ ಸೋಮಯ್ಯ, ಮುಕ್ಕಾಟಿರ ಮುತ್ತಪ್ಪ, ಕೋಡಿರ ಈರಪ್ಪ, ಕೋಡಿರ ತಮ್ಮ, ಬಲ್ಲಚಂಡ ಪೊನ್ನಣ್ಣ, ಬಲ್ಲಚಂಡ ಸೋಮಯ್ಯ, ಕುಲ್ಲಚಂಡ ಪ್ರಶಾಂತ್, ಕರೋಟಿರ ಜಯ, ಪಾಲಚಂಡ ಸಜನ್ ಸೋಮಣ್ಣ, ಬೇಪಡಿಯಂಡ ಕೀರ್ತನ್, ಬೇಪಡಿಯಂಡ ವಿನೋದ್, ಕುಲ್ಲಚಂಡ ಸಬ, ಕುಲ್ಲಚಂಡ ಮಂದಣ್ಣ, ಮುಕ್ಕಾಟಿರ ಅಯ್ಯಣ್ಣ, ಮುಕ್ಕಾಟಿರ ನಾಣಿ, ಪಂದ್ಯಂಡ ಡಾಲು, ನೆರ್ಪಂಡ ವಾಸು, ಚಲ್ಮಂಡ ಬೆಲ್ಲು, ಪಾಂಡಂಡ ಅರುಣ, ಪಾಲಚಂಡ ಅಜಿತ್, ಬಾಳೆಕುಟ್ಟಿರ ಗಣೇಶ್, ಬಲ್ಲಚಂಡ ಡಾಲಿ, ಚೆರುವಾಳಂಡ ತಮ್ಮಿ, ಕಾಂಗೀರ ಸತೀಶ್, ಪಾಲಚಂಡ ಅಭಿನ್, ಪಾಲೆಯಂಡ ಶಂಬು, ಕಾಂಗೀರ ಅರ್ಜುನ್, ಚೆರುವಾಳಂಡ ಅಪುಣು, ಬಾಚೆಟ್ಟಿರ ಲೋಕೇಶ್, ಚೇನಂಡ ಚಂಗಪ್ಪ, ಬಟ್ಟಿಯಂಡ ಸೋಮಯ್ಯ, ಚೆರುಮಂಡ ವಿವೇಕ್, ಮಾರ್ಚಂಡ ಪ್ರವೀಣ್, ಮುಕ್ಕಾಟಿರ ಹರೀಶ್, ಪಂದ್ಯಂಡ ಕಾಶಿ, ಕುಲ್ಲಚಂಡ ಶ್ಯಾಮ್, ಬೊವ್ವೆರಿಯಂಡ ಶರಣು, ಪಟ್ಟಚೆರುವಂಡ ಪೊನ್ನಣ್ಣ, ಬಿದ್ದಂಡ ಅಯ್ಯಪ್ಪ, ಕೋಡಿರ ಮೋಹಿತ್, ಬಲ್ಲಚಂಡ ರಂಜಿ, ಕೋಡಿರ ರಾಜ, ಚೇನಂಡ ಗಿರೀಶ್, ಕೋಡಿರ ಟ್ಯಾಗು, ಬೇಪಡಿಯಂಡ ಜಯ, ಮುಡ್ಯೋಳಂಡ ಪೊನ್ನಣ್ಣ, ಕೋಡಿರ ಕುಟ್ಟಪ್ಪ, ನಡಿಕೇರಿಯಂಡ ಚಿಮ್ಮಣ್ಣ ಪಾಲ್ಗೊಂಡಿದ್ದರು.