






ಮಡಿಕೇರಿ NEWS DESK : ಕರ್ನಾಟಕ ರಾಜ್ಯದಲ್ಲೇ ಮಾದರಿ ಗ್ರಾಮ ಪಂಚಾಯಿತಿ ಹಾಗೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಗೆ ಅಂಡಮಾನ್ ನಿಕೋಬಾರ್ ದ್ವೀಪಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಹೊದ್ದೂರು ಗ್ರಾ.ಪಂ ಆಡಳಿತ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ, ಹೊದ್ದೂರು ಗ್ರಾ.ಪಂ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದಿಂದ ಗ್ರಾ.ಪಂ ಅಭಿವೃದ್ಧಿಯತ್ತ ಸಾಗುತ್ತಿದೆ. ಹೊದ್ದೂರು ಗ್ರಾಮ ಪಂಚಾಯಿತಿ ಇದೀಗ ರಾಷ್ಟ್ರದ ಇತರೆ ರಾಜ್ಯಗಳ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದೆಂದು ಹಂಸ ಹೇಳಿದರು. ಅಂಡಮಾನ್ ನಿಕೋಬಾರ್ ದ್ವೀಪದ ಜನಪ್ರತಿನಿಧಿಗಳಾದ ಆರ್.ಮಾಧವನ್, ದಿಪಾಂಕರ್ ಮಿಸ್ಟ್ರಿ, ನಾರಾಯಣ್ ಮೊಂಡಲ್, ಸುಜಿತ್ ಮಿಸ್ಟ್ರಿ, ಉಮಾ ಶಂಕರ್ ಸರ್ಕಾರ್, ಎಸ್. ಪರಮಾನಂದನ್, ಪರಿಮಾಲ್ ಸಿ.ಹೆಚ್ ಮೊಂಡಲ್, ಸಿತಾ ಮಾಹಿಜಿ, ಶಿಬಾನಿ ಮಾಜುಮಡರ್, ಅರ್ಚನ ಕುಮಾರಿ, ಎಂ. ರಜನಿ, ಡಿ. ಪದ್ಮಾವತಿ, ಚಂಪಾ ದಾಸ್, ತಪಾಸಿ ಸಹಾ, ರಶೀದಾ ಬೀಬಿ, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ ಅಬ್ದುಲ್ಲಾ, ಸದಸ್ಯರಾದ ಹಮೀದ್ ಕಬಡಕ್ಕೇರಿ, ಕುಸುಮಾವತಿ, ಮೊಣ್ಣಪ್ಪ, ಟ್ಯಾನಿ, ಪಾರ್ವತಿ, ಮೊಯ್ದು ಇದ್ದರು.