






ಸುಂಟಿಕೊಪ್ಪ ಏ.10 NEWS DESK : ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ, ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 85 ನೇ ನೇಮೋತ್ಸವವು ಏ.12 ಮತ್ತು 13 ರಂದು ನಡೆಯಲಿದೆ ಎಂದು ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆಯುಧಾ ಪೂಜೆ, ಸಂಜೆ 5 ಗಂಟೆಗೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 6 ಗಂಟೆಗೆ ಮಂತ್ರವಾದಿ ಗುಳಿಗನ ನೇಮ, ರಾತ್ರಿ 8.30 ಗಂಟೆಗೆ ಶ್ರೀ ಆದಿನಾಗಬ್ರಹ್ಮ ಮೊಗೇರ ದೈವಗಳ ಗರಡಿ ಇಳಿಯುವುದು, ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ಜರುಗಲಿದೆ. ರಾತ್ರಿ 12 ಗಂಟೆಗೆ ಆದಿ ಮಾಯೆ ತನ್ನಿ ಮಾನಿಗ ಗರಡಿ ಇಳಿಯುವುದು, ಬೆಳಗ್ಗೆ 4.30 ಗಂಟೆಗೆ ಹರಕೆ ಮತ್ತು ಕಾಣಿಕೆ, ಬೆಳಿಗ್ಗೆ 8.ಗಂಟೆಗೆ ಕೊರಗತನಿಯ ದೈವದ ನೇಮ ನಡೆಯಲಿದೆ. ಏ.20 ರಂದು ಕೊರಗತನಿಯ ದೈವದ ಅಗೇಲು ಸೇವೆ ನಡೆಯಲಿದೆ ಎಂದು ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.