






ಸುಂಟಿಕೊಪ್ಪ ಏ.10 NEWS DESK : ನಾರ್ಗಾಣೆ ಶ್ರೀದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಏ.12, 14 ಮತ್ತು 15 ರಂದು ಧರ್ಮದೈವದ ನೇಮೋತ್ಸವವು ನಡೆಯಲಿದೆ ಎಂದು ದೇವಸ್ಥಾನದ ಮೇಲ್ವಿಚಾರಕರಾದ ಬಿ.ಡಿ.ರಾಜುರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏ.12 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಲಶ ನಡೆಯಲಿದೆ. ಏ.14ರಂದು ಸಂಜೆ 6 ಗಂಟೆಗೆ ಶ್ರೀ ಸ್ವಾಮಿ, ಮತ್ತು ಅಮ್ಮನವರ ಭಂಡಾರ ಮೆರವಣಿಗೆ, 6.30ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ರಾತ್ರಿ 8.30 ಕ್ಕೆ ಧೂಮಾವತಿ ಕೋಲ ರಾತ್ರಿ 10.30ಕ್ಕೆ ಆದಿ ದೇವತೆ ಕಲ್ಲುರ್ಟಿ ದೈವದ ಕೋಲ ಹಾಗೂ ಪ್ರಸಾದ ವಿತರಣೆ. ಏ.15 ರಂದು ಬೆಳಿಗ್ಗೆ 1 ಗಂಟೆಗೆ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿದೈವದ ಕೋಲ, 3.30 ಗಂಟೆಯಿಂದ ಗುಳಿಗ ಹಾಗೂ ಶ್ರೀ ಚಾಮುಂಡೇಶ್ವರಿ ಧರ್ಮದೈವದ ಕೋಲ ನಡೆಯಲಿದೆ. ಏ.15 ರಂದು ಬೆಳಿಗ್ಗೆ 9 ಗಂಟೆಯಿಂದ ಧರ್ಮದೈವಗಳಿಗೆ ಹರಕೆ, ಬೇಡಿಕೆಗಳನ್ನು ಒಪ್ಪಿಸುವುದು ಮತ್ತು ಮಧ್ಯಾಹ್ನ 1 ಗಂಟೆಯಿಂದ ಅನ್ನದಾನ ನಡೆಯಲಿದೆ ಎಂದು ಅಣ್ಣಪ್ಪ ಸ್ವಾಮಿ ಮೇಲ್ವಿಚಾರಕರಾದ ರಾಜುರೈ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.