






ಸುಂಟಿಕೊಪ್ಪ ಏ.10 NEWS DESK : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂತ ಮೇರಿ ಸಂಯುಕ್ತ ವಿದ್ಯಾಸಂಸ್ಥೆಯ ಇರ್ವರು ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನಗಳಿಸಿದ ಹಿನ್ನೆಲೆ ಶಾಲಾಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿಸಲಾಯಿತು. ಸಂತ ಮೇರಿ ಸಂಯುಕ್ತ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಿ.ಎನ್.ಡಿಂಪಲ್ ತಿಮ್ಮಯ್ಯ 591 ಅಂಕ ಶೇ98.05 ಹಾಗೂ ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದ ಡಿ.ಡಿ.ಸೃಜನ 587 ಶೇ.97.83 ಪಡೆದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಪ್ರಮುಖರು, ಶಿಕ್ಷಕರು ಸನ್ಮಾನಿಸಿ, ಗೌರವಿಸಿದರು. ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ಕಾಲೇಜಿನ ವ್ಯವಸ್ಥಾಪಕ ರೇ.ಫಾ.ವಿಜಯಕುಮಾರ್ ವಿದ್ಯಾರ್ಥಿಗಳ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಲೆಂದು ಶುಭಹಾರೈಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸೇಲ್ವರಾಜ್ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಇದ್ದರು.