






ಮಡಿಕೇರಿ NEWS DESK ಏ.10 : ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ (ಕೊನ್ನ ಪೂ) ಹೊನ್ನೇ ಹೂವು ವಿತರಣೆ, ವಿಷು ಕಣಿ ಹಾಗೂ ವಿಷು ಕೈನೀಟಂ ನ್ನು ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲು ಮಡಿಕೇರಿಯ ಹಿಂದೂ ಮಲಯಾಳಿ ಸಂಘ ನಿರ್ಧರಿಸಿದೆ. ಸಂಘದ ವತಿಯಿಂದ ಏ.13ರಂದು ಸಂಜೆ 5 ಗಂಟೆಗೆ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ಆವರಣದಲ್ಲಿ ಆಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಹಾಗೂ ಸ್ಥಾಪಕ ಅಧ್ಯಕ್ಷ ಕೆ.ಎಸ್.ರಮೇಶ್ ತಿಳಿಸಿದ್ದಾರೆ. ಸರ್ವ ಹಿಂದೂ ಮಲಯಾಳಿ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವ ಮೂಲಕ ಸದುಪಯೋಗ ಪಡೆದುಕೊಳ್ಳುಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್.ಹೆಚ್.ಪಿ, ಸಂಘಟನಾ ಕಾರ್ಯದರ್ಶಿ ಟಿ.ಆರ್.ಪ್ರಮೋದ್ ಹಾಗೂ ಸಹ ಖಜಾಂಚಿ ಪಿ.ವಿ.ಸುಬ್ರಮಣಿ ಉಪಸ್ಥಿತರಿದ್ದರು.