
ನಾಪೋಕ್ಲು ಏ.30 NEWS DESK : ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಆಟದ ಮೈದಾನದಲ್ಲಿ ನಡೆದ ನಾಪೋಕ್ಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫಾತಿಮಾ ಸ್ಟ್ರೈಕರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಂತಿಮ ಪಂದ್ಯದಲ್ಲಿ ಕೆ.ಕೆ ಬ್ರದರ್ಸ್ ವಿರುದ್ಧ ಫಾತಿಮಾ ಸ್ಟ್ರೈಕರ್ಸ್ ತಂಡ ಗೆಲುವು ಸಾಧಿಸಿ ಚಾಂಪಿಯನ್ ಪಡೆದುಕೊಂಡರೆ, ಕೆ.ಕೆ.ಬ್ರದರ್ಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮ್ಯಾನ್ ಆಫ್ ದಿ ಮ್ಯಾಚ್ ಆಗಿ ನಾಸಿರ್ ಹೊರಹೊಮ್ಮಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಬ್ದುಲ್ ರೆಹಮಾನ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವನೆ ಮುಖ್ಯ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಕೆ.ಎ.ಇಸ್ಮಾಯಿಲ್, ಎಂ.ಎ.ಮನ್ಸೂರ್ ಆಲಿ, ಅಬ್ದುಲ್ ಅಜೀಜ್, ರಶೀದ್ ಪಿ.ಎಂ, ಅಬೂಬಕ್ಕರ್ ಎಂ.ಎಂ, ಮಹಮ್ಮದ್ ಅಲಿ ಎಂ.ಎಸ್, ಅಹ್ಮದ್ ಸಿ.ಹೆಚ್, ಅರಫತ್ ಪಿ.ಎಂ, ಆಸಿಫ್ ಆಲಿ ಎಂ.ಎ, ಸಂಶು ಕಾರೆಕ್ಕಾಡು ಇನ್ನಿತರರು ಪಾಲ್ಗೊಂಡಿದ್ದರು. ಸಾನಿದ್ ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿದ್ದ ಗಣ್ಯರು ವಿಜೇತ ತಂಡಗಳಿಗೆ ಬಹುಮಾನವನ್ನು ನೀಡಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ.









