
ವಿರಾಜಪೇಟೆ ಮೇ 16 NEWS DESK : ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಯುವ ತಂಡದ ಮುಂದಾಳತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರುತ್ತಿರುವ ಕಲ್ಲುಬಾಯ್ಸ್ ತಂಡದ ವತಿಯಿಂದ ‘ಕಲ್ಲುಬಾಯ್ಸ್ -3 ನ್ಯಾಷನಲ್ ಲೆವೆಲ್ ಕಾಲ್ಚೆಂಡು ಪಂದ್ಯಾವಳಿ ನವೆಂಬರ್ ತಿಂಗಳಲ್ಲಿ ವಿರಾಜಪೇಟೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಹೀಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಲ್ಚೆಂಡು ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮೊದಲನೇ ಬಹುಮಾನ ಒಂದುವರೆ ಲಕ್ಷ ರೂ ನಗದು ಮತ್ತು ಟ್ರೋಫಿ ಎರಡನೇ ಬಹುಮಾನ ಒಂದು ಲಕ್ಷ ರೂ ನಗದು ಮತ್ತು ಟ್ರೋಫಿ, ಮೂರನೇ ಬಹುಮಾನ 40,000 ರೂ ನಗದು ಮತ್ತು ಟ್ರೋಫಿ, ನಾಲ್ಕನೇ ಬಹುಮಾನ 20,000 ರೂ ನಗದು ಮತ್ತು ಟ್ರೋಫಿ ಮತ್ತು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482731092 ಸಂಪರ್ಕಿಸುವಂತೆ ಕೋರಿದ್ದಾರೆ.









