
ಮಡಿಕೇರಿ NEWS DESK ಆ.4 : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೊಡಗಿನ ಏಳು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಭಾಗವಾಗಿ ಸಭಾ ಕಾರ್ಯಕ್ರಮ, ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥವನ್ನು ಆಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಭೋಜೇಗೌಡ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆ.7ರಂದು ಸಂಜೆ 6 ಗಂಟೆಗೆ ನಗರದ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಪಂಜಿನ ಮೆರವಣಿಗೆ ಆರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ಕಾವೇರಿ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಆ.8ರಂದು ಸಂಜೆ 6 ಗಂಟೆಗೆ ಮಾದಾಪುರದ ಇಗ್ಗೋಡ್ಲು ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ಪಂಜಿನ ಮೆರವಣಿಗೆ ಆರಂಭವಾಗಿ ಎಫ್‌ಎಂಸಿ ರಸ್ತೆಯ ಮೂಲಕ ಶ್ರೀಗಣಪತಿ ದೇವಾಲಯದವರೆಗೆ ಸಾಗಲಿದೆ. 7.30ಗಂಟೆಗೆೆ ಸಭಾ ಕಾರ್ಯಕ್ರಮ ನಡೆಯಲಿದೆ. ಕೊಡ್ಲಿಪೇಟೆಯಲ್ಲಿ ಆ.9 ರಂದು ಸಂಜೆ 6 ಗಂಟೆಗೆ ಆರ್‌ಎಂಸಿ ಮಾರುಕಟ್ಟೆ ಸಮೀಪದ ಶ್ರೀ ಗಣಪತಿ ದೇವಸ್ಥಾನದಿಂದ ಪಂಜಿನ ಮೆರವಣಿಗೆ ಆರಂಭಗೊoಡು ಮುಖ್ಯ ರಸ್ತೆಗಳಲ್ಲಿ ಸಂಚರಿಸಲಿದೆ. ಸಂಜೆ 7.30ಗಂಟೆಗೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೊನ್ನಂಪೇಟೆಯಲ್ಲಿ ಆ.10ರಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪ ಆರ್.ಎಂ.ಸಿ. ಆವರಣದಿಂದ ಖಾಸಗಿ ಬಸ್ ನಿಲ್ದಾಣದ ಮೂಲಕ ಬೈಪಾಸ್ ರಸ್ತೆಗಾಗಿ ಪೊನ್ನಂಪೇಟೆ ಕೊಡವ ಸಮಾಜದವರೆಗೆ ವಾಹನ ಜಾಥಾ ಸಾಗಲಿದೆ. ಸಭಾ ಕಾರ್ಯಕ್ರಮ ಬೆಳಗ್ಗೆ 11.30 ಗಂಟೆಗೆ ನಡೆಯಲಿದೆ. ಅಖಂಡ ಭಾರತದ ಸಂಕಲ್ಪ ದಿನದ ಪಂಜಿನ ಮೆರವಣಿಗೆ ವಿರಾಜಪೇಟೆಯಲ್ಲಿ ಆ.12ರಂದು ಸಂಜೆ 6 ಗಂಟೆಗೆ ತೆಲುಗರ ಬೀದಿ ಮಾರಿಯಮ್ಮ ದೇವಾಲಯದಿಂದ ಆರಂಭಗೊoಡು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ನಗರದ ಮಹಿಳಾ ಸಮಾಜದಲ್ಲಿ ಸಂಜೆ 7.30 ಗಂಟೆಗೆ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಶಾಲನಗರದಲ್ಲಿ ಆ.14ರಂದು ಸಂಜೆ 6 ಗಂಟೆಗೆ ಬೈಚನಹಳ್ಳಿ ಶ್ರೀಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಆರಂಭಗೊoಡು ನಗರ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ರೈತಭವನದಲ್ಲಿ ಸಭಾ ಕಾರ್ಯಕ್ರಮ ಸಂಜೆ 7.30 ಗಂಟೆಗೆ ನಡೆಯಲಿದೆ ಎಂದು ಭೋಜೇಗೌಡ ತಿಳಿಸಿದರು. *ಒಪ್ಪಿಗೆಗೆ ತೊಡಕು* ಸ್ವಾತಂತ್ರ್ಯೋತ್ಸವ ಸಂದರ್ಭ ನಡೆಸುವ ಕಾರ್ಯಕ್ರಮಗಳಿಗೆ ಸಂಬoಧಿಸಿದoತೆ ಪೊಲೀಸ್ ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಳ್ಳಲು ವಿವಿಧ ಇಲಾಖೆಗಳ ಸಮ್ಮತಿ ಪತ್ರ ಕೇಳಲಾಗುತ್ತಿದೆ ಮತ್ತು 3 ಲಕ್ಷ ರೂ.ಗಳ ಬಾಂಡ್ ಪಡೆಯಲಾಗುತ್ತಿದೆ ಎಂದು ಆರೋಪಿಸಿದ ಅವರು ಇಂತಹ ಕ್ರಮಗಳನ್ನು ಖಂಡಿಸುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಶರತ್ ಪೆಮ್ಮಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಎಲ್.ಹರೀಶ್, ಶಾಂತೆಯoಡ ತಿಮ್ಮಯ್ಯ, ವಿರಾಜಪೇಟೆ ತಾಲ್ಲೂಕು ಸಂಯೋಜಕ ಬಿ.ಬಿ.ಸಜೀವ್ ಹಾಗೂ ಮಡಿಕೇರಿ ತಾಲ್ಲೂಕು ಸಂಯೋಜಕ ಅಪ್ಪು ಬಾಲಕೃಷ್ಣ ರೈ ಉಪಸ್ಥಿತರಿದ್ದರು.








