
ವಿರಾಜಪೇಟೆ ಮೇ 16 NEWS DESK : ಬೇಟೋಳಿ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸಭಾಭವನದಲ್ಲಿ ಮಕ್ಕಳ ವೈದಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶ್ರೀ ಗಣಪತಿ ಹಾಗೂ ಶ್ರೀ ಪುದುಪಾಡಿ ಅಯ್ಯಪ್ಪ ದೇವಸ್ಥಾನದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಪುರೋಹಿತರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಸಭಾ ಭವನದಲ್ಲಿ ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಉಪಾಧ್ಯಕ್ಷ ಬಿ.ಜಿ.ನಂದ ಬೋರ್ಕರ್ ಹಾಗೂ ಗೀತಾ ಬೋರ್ಕರ್ ದಂಪತಿಗಳು ಶಿಬಿರವನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಅರ್ಚಕ ರಾಜೇಶ್ ಭಟ್ ಶಿಬಿರದ ದಿನಚರಿ ಹಾಗೂ ಶಿಬಿರಾರ್ಥಿಗಳು ಪಾಲಿಸ ಬೇಕಾದ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವೈದಿಕ ವಿಧಾನಗಳನ್ನು ವಿವರಿಸಿದರು. ಒಟ್ಟು ಹದಿನೈದು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್, ವೇಣುಗೋಪಾಲ್ ಭಟ್, ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಪಿ.ಸಂತೋಷ್, ಶೈಲೇಶ್ ಕಾಮತ್, ಶಾಂತಿಭೂಷಣ್ ಬೋರ್ಕರ್, ಜ್ಯೋತಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಬಿರವು ಒಟ್ಟು ನಾಲ್ಕು ದಿವಸಗಳ ಕಾಲ ನಡೆಯಲಿದೆ.









