
ಮಡಿಕೇರಿ ಮೇ 28 NEWS DESK : ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ 93ನೇ ಜನ್ಮದಿನದ ಪ್ರಯುಕ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು. ಬೆಂಗಳೂರು ಮಹಾನಗರ ಜನತಾದಳ ಜಾತ್ಯತೀತ ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಜಯನಗರ 9ನೇ ಬ್ಲಾಕ್ ಬನ್ನಿ ಬೇಕರಿ ಸರ್ಕಲ್ ನಿಂದ ಜಯನಗರ 4ನೇ ಬ್ಲಾಕ್ ಕಾಂಪ್ಲೆಕ್ಸ್ ಮಾರ್ಗವಾಗಿ ಸೌತ್ ಎಂಡ್ ಸರ್ಕಲ್ ನಲ್ಲಿರುವ ಗುಣಶೀಲ ಆಸ್ಪತ್ರೆಯವರೆಗೆ ಸುಮಾರು 6 ಕಿ.ಮೀ ಜಾಥಾ ನಡೆಸಿದ ಜೆಡಿಎಸ್ ಕಾರ್ಯಕರ್ತರು ಕ್ಯಾನ್ಸರ್ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಅರಿವು ಮೂಡಿಸಿದರು. ಹೋಟೆಲ್ ಗಳಲ್ಲಿ ಕಲರ್ ಮತ್ತು ಕೆಮಿಕಲ್ ಬಳಸಿ ಆಹಾರವನ್ನು ತಯಾರಿಸಿ ಮಾರಾಟ ಮಾಡದಂತೆ ವಿವಿಧ ಸಲಹೆ ಸೂಚನೆಗಳನ್ನೊಳಂಗಡ ಕರಪತ್ರವನ್ನು ಹೊಟೇಲ್, ಅಂಗಡಿ ಮುಂಗಟ್ಟುಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು. ಕ್ಷೇತ್ರದ ಅಧ್ಯಕ್ಷ ಟಿ.ಆರ್ ತುಳಸಿರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಶೈಲಾ ಸಂತೋಜಿ ರಾವ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ನಾಗೇಶ್ವರರಾವ್, ಮಹಿಳಾ ಮುಖಂಡರಾದ ಕನ್ಯಾಕುಮಾರಿ, ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳಾದ ಬಿ.ಎಸ್.ಗಣೇಶ್ ಬೊಮ್ಮನಹಳ್ಳಿ, ಓ.ಪಿ.ಓಬಳೇಶ್ ಮಹದೇವಪುರ, ಕೆ.ಜೆ.ರಮೇಶ್, ವಿಜಯಕುಮಾರ್ ಕೃಷ್ಣ ಜಯನಗರ, ಆನಂದ ಕಣ್ಣನ್ ಶಾಂತಿನಗರ, ಚಂದ್ರಶೇಖರ್ ಹೆಬ್ಬಾಳ, ಬಿ.ಆರ್.ಪ್ರಕಾಶ್ ಗೌಡ, ಮಾಜಿ ಅಧ್ಯಕ್ಷ ಮುನಿವೆಂಕಟಪ್ಪ ಮಹದೇವಪುರ, ಬೆಂಗಳೂರು ನಗರದ ವಿಭಾಗಗಳ ಅಧ್ಯಕ್ಷರುಗಳಾದ ಸ್ಯಾಮುಯಲ್ ಯುವ ವಿಭಾಗ, ವಿ.ಜನಾರ್ಧನ್ ಎಸ್ ಟಿ ವಿಭಾಗ, ಮಹೇಶ್ ಸೇವಾದಳ ವಿಭಾಗ, ಅಪ್ರೋಜ್ ಬೇಗ್ ಅಲ್ಪಸಂಖ್ಯಾತರ ವಿಭಾಗ, ಗೋಪಾಲ್ ಕಾರ್ಮಿಕ ವಿಭಾಗ ಹಾಗೂ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು, ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.









