
ಮಡಿಕೇರಿ ಜೂ.9 NEWS DESK : ಸ್ನೇಹಕೃಪಾ ಮೂವೀಸ್ ಲಾಂಚನದಲ್ಲಿ ಕಲಾ ಸಾರ್ವಭಾಮ ಸುಧಾಕರ ಬನ್ನಂಜೆ ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿದ ಗಂಟ್ ಕಲ್ವೆರ್ ತುಳು ಚಿತ್ರ ಇದೀಗ ಕರಾವಳಿಯಲ್ಲಿ ಸದ್ದು ಮಾಡುತ್ತಿದೆ. ಕರಾವಳಿಯ ಜನರ ಮನಗೆದ್ದ ಈ ಚಿತ್ರ ಇದೀಗ ಮೂರನೇ ವಾರದತ್ತ ಮುನ್ನಡೆದಿದೆ. ಚಿತ್ರ ನೋಡಿದ ಜನರು ಉತ್ತಮ ಕತೆ, ಹಾಸ್ಯ, ಹಾಡು, ಸಾಹಸ ತುಂಬಿರುವ ಈ ಚಿತ್ರ ಟೋಟಲ್ ಪ್ಯಾಕೇಜ್ ಅನ್ನುತ್ತಿದ್ದಾರೆ. ನಾಯಕ ಆರ್ಯನ್ ಶೆಟ್ಟಿ, ನಾಯಕಿ ಸ್ಮಿತಾ ಸುವರ್ಣ ಜನರ ಮನ ಗೆದ್ದಿದ್ದಾರೆ. ಆರ್ಯನ್ ಸಾಹಸ ದೃಶ್ಯ ಸೂಪರ್ ಅಂತಿದ್ದಾರೆ ಚಿತ್ರ ನೋಡಿದವರು. ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ,ಉಮೇಶ್ ಮಿಜಾರ್, ಸುಂದರ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರವಿ ಸುರತ್ಕಲ್ ಮುಂತಾದ ಹಾಸ್ಯ ದಿಗ್ಗಜರ ಜತೆ ಪ್ರಶಾಂತ ಎಳ್ಳಂಪಳ್ಳಿ ಚೊಟ್ಟ ಪಾತ್ರದ ಮೂಲಕ ಮಿಂಚಿದ್ದಾರೆ. ಪಡೀಲ್ ಬೋಳಾರ ಅವರ ಹಾಸ್ಯದ ಜುಗಲ್ಬಂದಿ ಹೊಟ್ಟೆಹುಣ್ಣಾಗುವಂತೆ ನಗಿಸುತ್ತದೆ. ಹೊಸ ಬಗೆಯ ಹಾಸ್ಯ ಇಲ್ಲಿ ಪರಿಚಯವಾಗಿದೆ. ರಂಗ ಭೂಮಿ ಚಿತ್ರರಂಗ ಕಲಾವಿದರ ದಂಡೇ ಇಲ್ಲಿದೆ. ಹನ್ನೆರಡು ನಾಯಕ ನಟರು ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂರಕ್ಕು ಮಿಕ್ಕಿದ ಕಲಾವಿದರಿದ್ದಾರೆ. ವಿ.ಮನೋಹರ ಅವರ ಸುಮಧುರ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಕ್ಯಾಮರಾ ಎಡಿಟಿಂಗ್ ಕೆಲಸವೂ ಅಚ್ಚುಕಟ್ಟಾಗಿದೆ. ನಿರ್ದೇಶಕ ಬನ್ನಂಜೆ ಇಲ್ಲಿ ಗೆದ್ದಿದ್ದಾರೆ. ಅವರ ಜತೆ ನಿರ್ಮಾಣಕ್ಕೆ ಹೆಗಲು ಕೊಟ್ಟವರು ರಾಜಾರಾಂ ಶೆಟ್ಟಿ ಉಪ್ಪಳ, ಗಿರೀಶ್ ಪೂಜಾರಿ, ಮಮತಾ ಬನ್ನಂಜೆ ಒಟ್ಟಲ್ಲಿ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಗಂಟ್ ಕಲ್ವೆರ್.









