
ಸಕಲೇಶಪುರ NEWS DESK ಜೂ.15 : ಭಾರೀ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ಕಾಡಾನೆ ಮತ್ತು ಅದರ ಮರಿಯಾನೆ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಗುಡ್ಡೆಬೆಟ್ಟ ಗ್ರಾಮದ ತೋಟವೊಂದರಲ್ಲಿ ನಡೆದಿದೆ. ಆಹಾರ ಹುಡುಕಿ ಬಂದ ತಾಯಿಯಾನೆ ಹಾಗೂ ಮರಿಯಾನೆ ವಿದ್ಯುತ್ ಗೆ ಜೊತೆಯಾಗಿ ಬಲಿಯಾಗಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








