
ಮಡಿಕೇರಿ ಜೂ.18 NEWS DESK : ರೈತರ ಜೀವನಾಡಿಯಾಗಿರುವ ಭತ್ತ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಉದ್ದೇಶದಿಂದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಯಂತ್ರಶ್ರೀ’ ಎಂಬ ಯಾಂತ್ರೀಕೃತ ಭತ್ತ ಬೇಸಾಯವನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ ರೈತರಿಗೆ ಭತ್ತ ಬೇಸಾಯ ಮಾಡಲು ಪ್ರೋತ್ಸಾಹ ನೀಡುತ್ತಿದ್ದು, ವ್ಯವಸಾಯ ಚಟುವಟಿಕೆಯಲ್ಲಿ ಬೀಜದಿಂದ ಬೀಜದವರೆಗೆ ಸಂಪೂರ್ಣ ಯಂತ್ರೋಪಕರಣಗಳ ಬಳಕೆಯಿಂದ ಈ ಹಿಂದೆಗಿಂತ ಅಧಿಕ ಇಳುವರಿ ಪಡೆಯುವಂತಾಗಿದೆ. ಯಂತ್ರಶ್ರೀ ಯೋಜನೆಯ ಮೂಲಕ ಇದುವರೆಗೆ 96 ತಾಲೂಕುಗಳಲ್ಲಿ 44,119 ರೈತರನ್ನು ಪ್ರೇರೇಪಿಸಿ ಸುಮಾರು 1,00,254 ಎಕ್ರೆ ಪ್ರದೇಶಗಳಲ್ಲಿ ಕೃಷಿ ಭೂಮಿಯನ್ನು ಹದಗೊಳಿಸುವುದರಿಂದ ಮೊದಲ್ಗೊಂಡು ಕೊಯ್ಲೋತ್ತರದವರೆಗೆ ಸಂಪೂರ್ಣ ಯಾಂತ್ರೀಕೃತಗೊಳಿಸುವಲ್ಲಿ ರೈತರಿಗೆ ಪ್ರೋತ್ಸಾಹ ನೀಡಲಾಗಿದೆ.









