ನವದೆಹಲಿ NEWS DESK ಜೂ.29 : ಪ್ರಾಕೃತಿಕ ವಿಕೋಪಗಳಿಂದ ನಲುಗಿ ಹೋಗಿರುವ ಪಾಕಿಸ್ತಾನದಲ್ಲಿ ಒಂದೇ ದಿನ ಮೂರು ಬಾರಿ ಭೂಕಂಪನವಾಗಿದೆ. ಭೂಕಂಪದ ಕೇಂದ್ರಬಿಂದುವು ಪಾಕಿಸ್ತಾನದ ಮುಲ್ತಾನ್ ನಗರದಿಂದ ಪಶ್ಚಿಮಕ್ಕೆ 149 ಕಿಲೋಮೀಟರ್ ದೂರದಲ್ಲಿ, 30.25 ಉತ್ತರ ಅಕ್ಷಾಂಶ ಮತ್ತು 69.82 ಪೂರ್ವ ರೇಖಾಂಶದಲ್ಲಿ ಇದೆ ಎಂದು ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರವನ್ನು ಉಲ್ಲೇಖಿಸಿ ವರದಿ ಮಾಡಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.8 ಮತ್ತು 5.2ರಷ್ಟು ದಾಖಲಾಗಿದೆ. ಪಾಕಿಸ್ತಾನದಲ್ಲಿ 3 ಭಾರಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ. ಭೂಕಂಪನದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.










