ಜಮ್ಮು NEWS DESK ಜೂ.30 : ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕರ ಮಾರ್ಗದರ್ಶಿಯನ್ನು ಭಾರತೀಯ ಸೇನಾಪಡೆ ಗಡಿಯಲ್ಲಿ ಬಂಧಿಸಿದೆ. ಪೂಂಚ್ ಮತ್ತು ರಜೌರಿ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಮೊಹಮ್ಮದ್ ಆರಿಫ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಭಾರೀ ಶಸಾಸ್ತ್ರಗಳೊಂದಿಗೆ ನಾಲ್ವರು ಜೈಶ್-ಎ- ಮೊಹಮ್ಮದ್ (ಎಇಒ)ಉಗ್ರರು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಇವರೊಂದಿಗೆ ಮೊಹಮ್ಮದ್ ಆರಿಫ್ ಕೂಡ ಇದ್ದ. ಉಳಿದ ಭಯೋತ್ಪಾದಕರು ಗಾಯಗೊಂಡು ಪಾಕಿಸ್ತಾನದ ಕಡೆಗೆ ಓಡಿ ಹೋಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದೆ.










