ಮಡಿಕೇರಿ ಜೂ.30 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕ ಪ್ರಕಟಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಲೇಖಕರು ಅರೆಭಾಷೆ ಕಥೆ, ಅರೆಭಾಷೆ ಅಜ್ಜಿ ಕಥೆ, ಅರೆಭಾಷೆ ಜನಪದ, ಅರೆಭಾಷೆ ಕವನ, ಅರೆಭಾಷೆ ಲೇಖನ, ಅರೆಭಾಷೆ ವಿಚಾರ ಸಾಹಿತ್ಯ, ಅರೆಭಾಷೆ ಲಲಿತ ಪ್ರಬಂಧ, ಅರೆಭಾಷೆ ಸಂಶೋಧನ ಕೃತಿಗಳು ಇನ್ನಿತರೆ ಬರಹಗಳಿದ್ದಲ್ಲಿ ಡಿಟಿಪಿ ಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ಹಾಗೂ ಇ-ಮೇಲ್ ಮೂಲಕ arebaseacademy@gmail.com ಕಳುಹಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಕೋರಿದ್ದಾರೆ. ಆದ್ದರಿಂದ ತಮ್ಮ ಡಿಟಿಪಿ ಪ್ರತಿಗಳನ್ನು ಸಲ್ಲಿಸಲು 2025 ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ ನಂ 6362522677 ಸಂಪರ್ಕಿಸಬಹುದು. arebaseacademy@gmail.com ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿಯದಾಗಿರುತ್ತದೆ ಹಾಗೂ ಬರಹ ಕನಿಷ್ಟ 70 ರಿಂದ 80 ಪುಟಗಳಿರಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.











