ನಾಪೋಕ್ಲು ಜು.4 NEWS DESK : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚೆಂಬು ಬಿಜೆಪಿ ಶಕ್ತಿ ಕೇಂದ್ರ ಹಾಗೂ ರೈತ ಮೋರ್ಚಾದ ಸಹಯೋಗದಲ್ಲಿ ವಿಶ್ವ ಪರಿಸರ ದಿವಸ್ ಆಚರಿಸಲಾಯಿತು. ಬಾಲಂಬಿಯಲ್ಲಿ ವಿವಿಧ ತಳಿಯ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಶಕ್ತಿಕೇಂದ್ರ ಅಧ್ಯಕ್ಷ ಸುಬ್ರಮಣ್ಯ ಉಪಾದ್ಯಾಯ, ಗ್ರಾ.ಪಂ ಅಧ್ಯಕ್ಷ ತೀರ್ಥಾರಾಮ ಪೂಜಾರಿಗದ್ದೆ, ರೈತಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ನಿಡಿಂಜಿ, ಗ್ರಾ.ಪಂ ಸದಸ್ಯರಾದ ರಮೇಶ್ ಹುಲ್ಲುಬೆಂಕಿ, ವಸಂತ ಊರುಬೈಲು, ಸೊಸೈಟಿ ನಿರ್ದೇಶಕರಾದ ದಿನೇಶ್ ಸಣ್ಣಮನೆ, ರಾಮಮೂರ್ತಿ ಉಂಬಳೆ, ವಸಂತ ಕುದ್ರೆಪಾಯ, ಮಾಜಿ ಉಪಾಧ್ಯಕ್ಷ ವಾಸುದೇವ ನಿಡಿಂಜಿ ಕಾರ್ಯಕ್ರಮದ ಉಸ್ತುವಾರಿ ಅನಂತ್ ಊರುಬೈಲು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ : ದುಗ್ಗಳ ಸದಾನಂದ.











