ಮಡಿಕೇರಿ ಜು.12 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಡವ ಭಾಷೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ ಏರ್ಪಡಿಸುವ ಸಂಬಂಧ ಸ್ವರಚಿತ ಕವನ ಆಹ್ವಾನಿಸಲಾಗಿದೆ. ಯಾವುದೇ ಜಾತಿ ಧರ್ಮ ಆಧಾರಿತ ಕವನಗಳನ್ನು ಹೊರತುಪಡಿಸಿ, ಕೊಡವ ಸಾಹಿತ್ಯ-ಸಂಸ್ಕೃತಿ ಇಲ್ಲಿನ ಪರಿಸರ, ಪ್ರಕೃತಿ ಒಳಗೊಂಡಂತೆ ತಾತ್ವಿಕ ವಿಚಾರಗಳಿಗೆ ಒತ್ತುಕೊಡುವಂತೆ ಕವನಗಳಿಗೆ ಅವಕಾಶ ನೀಡಲಾಗುವುದು. 25 ಸಾಲುಗಳಿಗೆ ಮೀರಿದ ಕವನಗಳನ್ನು ವಾಚಿಸಲು ಅವಕಾಶ ಇರುವುದಿಲ್ಲ. ಯಾವುದೇ ಕವನಗಳ ಸಾಲುಗಳನ್ನು ಗೋಷ್ಠಿಯಲ್ಲಿ ಪುನರುಚ್ಚರಿಸುವಂತಿಲ್ಲ. ಕವನಗಳನ್ನು ಕಳುಹಿಸುವ ಹಾಗೂ ಭಾಗವಹಿಸುವ ಕವಿಗಳಿಗೆ ಜಾತಿ-ಧರ್ಮಗಳ ನಿರ್ಬಂಧ ಇರುವುದಿಲ್ಲ. ಕೊಡವ ಭಾಷೆಯು ಕಡ್ಡಾಯವಾಗಿದ್ದು, ತಮಗಳ ಕವನಗಳನ್ನು ಅಕಾಡೆಮಿ ಮೊಬೈಲ್ ಸಂಖ್ಯೆ 8762942976 ಕ್ಕೆ ಕಳುಹಿಸಲು ಜುಲೈ, 19 ಕೊನೆಯ ದಿನವಾಗಿದೆ. ಕವಿಗೋಷ್ಠಿಯು ನಾಯಕಂಡ ಬೇಬಿ ಚಿಣ್ಣಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಕಂಬೆಯಂಡ ಡೀನಾ ಬೋಜಣ್ಣ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕಾಡೆಮಿ ನಿಯಮದಂತೆ ಕವಿಗೋಷ್ಠಿಗೆ ಆಯ್ಕೆಯಾಗುವ ಹಾಗೂ ಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳಿಗೆ ಸಂಭಾವನೆ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ತಿಳಿಸಿದ್ದಾರೆ.










