
ಬೆಂಗಳೂರು ಜು.24 NEWS DESK : ಬೆಲ್ಜಿಯಂ ದೇಶದ ರಾಯಭಾರಿಯವರಾದ H.E. ಡಿಡ್ಯಾರ್ ವ್ಯಾಂಡೆರ್ ಹಾಸ್ಸೇಲ್ಟ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು. ತಮ್ಮ ನಿವಾಸ ಕಾವೇರಿಯಲ್ಲಿ ತಮ್ಮ ದೇಶದ ನಿಯೋಗದೊಂದಿಗೆ ಬೆಲ್ಜಿಯಂ ರಾಯಭಾರಿ ಹಲವು ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಸರಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.









