
ಮಡಿಕೇರಿ ಆ.15 NEWS DESK : ವಿದ್ಯುತ್ ಸ್ಪರ್ಶಿಸಿ ಹಸುವನ್ನು ಕಳೆದುಕೊಂಡು ರೈತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪರಿಹಾರ ಚೆಕ್ ವಿತರಿಸಿದರು.ಕಾಕೋಟುಪರಂಬು ಪಂಚಾಯಿತಿಯ ಕುಂಜಲಗೇರಿ ಗ್ರಾಮದ ಚಿಯಂಡೀರ ಸುರೇಶ್ ಹಾಗೂ ಸುಬ್ರಮಣಿ ಎಂಬ ರೈತರ ಹಸುಗಳು, ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ವಿಷಯ ತಿಳಿದೊಡನೆ ಸರ್ಕಾರ ಮಟ್ಟದಲ್ಲಿ ಮಾತನಾಡಿದ ಶಾಸಕರು ರೈತ ಕುಟುಂಬಕ್ಕೆ ರೂ.1.62ಲಕ್ಷ ಪರಿಹಾರ ಒದಗಿಸುವಲ್ಲಿ ಸಫಲರಾಗಿದ್ದರು. ಇಂದು ವಿರಾಜಪೇಟೆಯ ತಮ್ಮ ಗೃಹ ಕಚೇರಿಯಲ್ಲಿ ರೈತನಿಗೆ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭ ಪ್ರಮುಖರಾದ ಬಟ್ಟಕಾಳಂಡ ರಾಜ, ಮುಂಡಂಡ ಅನಿಲ್ ಬಿದ್ದಪ್ಪ, ಬಂಟ್ರ ದಯಾ ರೈ, ಬೋವೇರಿಯಂಡ ಅಜಿತ್, ಚೆಸ್ಕಾಂ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.








