Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸೋಮವಾರಪೇಟೆ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ*
  • *ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ 2.3 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ*
  • *ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪಿ.ಆರ್.ರಾಜೇಶ್ , ಕಾಯ೯ದಶಿ೯ಯಾಗಿ ಡಾ.ಚೇತನ್ ಪದಗ್ರಹಣ; ಸಮಾಜಮುಖಿ ಸದಸ್ಯರು ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರಬುನಾದಿ – ಪ್ರಕಾಶ್ ಬೆಳವಾಡಿ*
  • *ಮಡಿಕೇರಿ ನಗರ ಯುವ ಕಾಂಗ್ರೆಸ್ ಗೆ ಹೊಸ ನಾಯಕತ್ವ : ಅಧ್ಯಕ್ಷರಾಗಿ ಅರ್ಜುನ್ ಸೂರ್ಯ ಆಯ್ಕೆ*
  • *ಗುಮ್ಮನಕೊಲ್ಲಿ ವೃತ್ತಕ್ಕೆ ಅರೆಸೇನಾಪಡೆ ಯೋಧರ ವೃತ್ತ ಎಂದು ನಾಮಕರಣಕ್ಕೆ ಆಗ್ರಹ*
  • *ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯಕ್ಕೆ ಕರವೇ ಸ್ವಾಭಿಮಾನಿ ಬಣ ಮನವಿ*
  • * ಕೊಡಗು : ಜಿಲ್ಲಾಸ್ಪತ್ರೆ, ಸರ್ಕಾರಿ ಕಚೇರಿಗಳು ಮತ್ತು ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭೇಟಿ : ಪರಿಶೀಲನೆ*
  • *ಎಂ.ಬಿ. ವಿನ್ಸೆಂಟ್ ಅವರಿಗೆ ಜ್ಞಾನ ಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ : ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ : ಅಮ್ಮಾಟಂಡ ಎ.ಜೋಯಪ್ಪ
  • *ಕೊಡವ ಅಕಾಡೆಮಿ ಮತ್ತು ನಾಪೋಕ್ಲು ಕೊಡವ ಸಮಾಜದಿಂದ ಮಕ್ಕಡ ನಮ್ಮೆ*
  • *ನಿವೃತ್ತ ಸೇನಾಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳಿಂದ ಮುಖ್ಯಮಂತ್ರಿಗಳ ಭೇಟಿ : ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪಿ.ಆರ್.ರಾಜೇಶ್ , ಕಾಯ೯ದಶಿ೯ಯಾಗಿ ಡಾ.ಚೇತನ್ ಪದಗ್ರಹಣ; ಸಮಾಜಮುಖಿ ಸದಸ್ಯರು ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರಬುನಾದಿ – ಪ್ರಕಾಶ್ ಬೆಳವಾಡಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪಿ.ಆರ್.ರಾಜೇಶ್ , ಕಾಯ೯ದಶಿ೯ಯಾಗಿ ಡಾ.ಚೇತನ್ ಪದಗ್ರಹಣ; ಸಮಾಜಮುಖಿ ಸದಸ್ಯರು ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರಬುನಾದಿ – ಪ್ರಕಾಶ್ ಬೆಳವಾಡಿ*

ಜುಲೈ 5, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಜು. 05- ರೋಟರಿ ಸೇರಿದಂತೆ ಯಾವುದೇ ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರ ಬುನಾದಿಯೇ ಆ ಸಂಸ್ಥೆಯ ಉತ್ಸಾಹಿ ಸದಸ್ಯರಾಗಿದ್ದು, ಈ ನಿಟ್ಟಿನಲ್ಲಿ ಸಮಾನಮನಸ್ಕ, ಸಮಾಜಮುಖಿ  ಸದಸ್ಯರ ಸೇಪ೯ಡೆ ಅತ್ಯಗತ್ಯ ಎಂದು  ಬೆಂಗಳೂರಿನ ರೋಟರಿ ಜಿಲ್ಲೆ 3191  ರ ಮಾಜಿ ಸಹಾಯಕ ಗವನ೯ರ್ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ಪೂಳಕಂಡ ರಾಜೇಶ್ ಮತ್ತು ಕಾಯ೯ದಶಿ೯ ಡಾ. ಜಿ.ಡಿ.  ಚೇತನ್ ಮತ್ತು ಆಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆಗಳು ಸಮಾಜದಲ್ಲಿ ಅಸಾಧ್ಯವಾಗಿದೆ ಎಂಬಂಥ ಯೋಜನೆಗಳನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ರೋಟರಿಯಂಥ ಸಂಸ್ಥೆಗಳು ಕಾಯ೯ಪ್ರವೖತ್ತವಾಗಬೇಕು. ಅಂಥ ಸವಾಲನ್ನು ರೋಟರಿ ಸದಸ್ಯರು ಸ್ವೀಕರಿಸುವ ಮೂಲಕ ಬದ್ದತೆ ತೋರಬೇಕೆಂದು ಪ್ರಕಾಶ್ ಬೆಳವಾಡಿ ಕರೆ ನೀಡಿದರು. ಯಾವುದೇ ರೋಟರಿ ಸಂಸ್ಥೆಯು ಯಶಸ್ವಿ ಕಾಯ೯ಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಯೋಜನೆ  ನೀಡಬೇಕೆಂದಾದಲ್ಲಿ ಅದಕ್ಕೆ ಸದಸ್ಯರ ಬಲ, ಬೆಂಬಲ ಅತ್ಯಗತ್ಯವಾಗಿದೆ. ಹೀಗಾಗಿ ಸಾಮಾಜಿಕ ಕಳಕಳಿ ಹೊಂದಿರುವ ಸದಸ್ಯರನ್ನು ರೋಟರಿಗೆ ಸೇಪ೯ಡೆ ಮಾಡುವುದು ಅಗತ್ಯ ಎಂದೂ ಅವರು ಅಭಿಪ್ರಾಯಪಟ್ಟರು.


ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ರೋಟರಿಯು  ತಾನು ಸಾವ೯ಜನಿಕರಿಂದ ಸಂಗ್ರಹಿಸಿದ ಪ್ರತೀಯೊಂದು ರುಪಾಯಿಯನ್ನೂ ಫಲಾನುಭವಿಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾವ೯ಜನಿಕ ದೇಣಿಗೆ ರೋಟರಿಯಲ್ಲಿ  ದುರುಪಯೋಗವಾದ, ವ್ಯಥ೯ವಾದ ಯಾವುದೇ ಪ್ರಕರಣಗಳಿಲ್ಲದಿರುವುದೇ ರೋಟರಿಯ ಹೆಗ್ಗಳಿಕೆಯಾಗಿದೆ ಎಂದೂ ಪ್ರಸಾಶ್ ಬೆಳವಾಡಿ ನುಡಿದರು.

ರೋಟರಿ ಸಂಸ್ಶೆಯು ವ್ಯಾಪಾರಿ ಯೋಜನೆಗೂ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದ ಪ್ರಕಾಶ್ ಬೆಳವಾಡಿ, ಬ್ರೆಜಿಲ್ ದೇಶಕ್ಕೆ ಕೊಡಗಿನಿಂದ ರೋಟರಿಯಲ್ಲಿರುವ ಕಾಫಿ ಕೖಷಿಕರು ತೆರಳಿ ಅಲ್ಲಿನ ಕಾಫಿ ಉದ್ಯಮದ ಸ್ಥಿತಿಗತಿ ಅವಲೋಕಿಸಿ, ತರುವಾಯ ಅಲ್ಲಿನ ಕಾಫಿ ಉದ್ಯಮದ ಯಶಸ್ಸನ್ನು ಕೊಡಗಿನಲ್ಲಿಯೂ ಜಾರಿಗೊಳಿಸಲು ಸಾಧ್ಯವಿದೆ ಇಂಥ ಹೊಸ ಪ್ರಯೋಗಗಳ ಬಗ್ಗೆ ರೋಟರಿ ಸದಸ್ಯರು ಚಿಂತನೆ ಹರಿಸಬೇಕೆಂದರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ಹೆಚ್.ಎಸ್. ವಸಂತ್ ಕುಮಾರ್  ಮಿಸ್ಟಿ ಹಿಲ್ಸ್  ನ  ವಾತಾ೯ಸಂಚಿಕೆ ರೋಟೋ ಮಿಸ್ಟ್ ಲೋಕಾಪ೯ಣೆಗೊಳಿಸಿ ಮಾತನಾಡಿ,  ರೋಟರಿ ಜಿಲ್ಲೆ  3181 ರಲ್ಲಿ   ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆಯನ್ನು ಈ ವಷ೯ದಿಂದ ಜಾರಿಗೊಳಿಸಲಾಗಿದ್ದು, ಉತ್ಸವಗಳಲ್ಲಿ ರೋಟರಿಯು ಕೂಡ ವಿಭಿನ್ನ ರೀತಿಯ ಸೇವಾ ಕಾಯ೯ಗಳನ್ನು ಹಮ್ಮಿಕೊಳ್ಳಲಿದೆ ಎಂದರು.  ರೋಟರಿ ವಲಯ 6 ರಲ್ಲಿಯೇ 70 ಸದಸ್ಯರೊಂದಿಗೆ ಮಿಸ್ಟಿ ಹಿಲ್ಸ್ ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದೂ ವಸಂತ್ ಕುಮಾರ್ ಶ್ಲಾಘಿಸಿದರು.

ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿಗೆ ಹೊಸ ಸದಸ್ಯರ ಸೇಪ೯ಡೆ ನಿಟ್ಟಿನಲ್ಲಿ ಪ್ರತೀ ಕ್ಲಬ್ ಗಳೂ ಗಮನ ನೀಡಬೇಕೆಂದರು.

ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ಪಿ.ಆರ್.ರಾಜೇಶ್ ಮಾತನಾಡಿ, ಮುಂದಿನ 1 ವಷ೯ಗಳ ಕಾಲ ಸಮಾಜಮುಖಿಯಾಗಿ ಅನೇಕ ಕಾಯ೯ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಅಗತ್ಯ ಇರುವವರಿಗೆ ನೆರವು ನೀಡಲು ಮಿಸ್ಟಿ ಹಿಲ್ಸ್ ಬದ್ದವಾಗಿದೆ ಎಂದು ನುಡಿದರು. ಜಗತ್ತಿನ ಬದಲಾವಣೆಯ ಪ್ರಕ್ರಿಯೆಗೆ ಅನುಗುಣವಾಗಿ ರೋಟರಿಯಲ್ಲಿಯೂ ವಿಭಿನ್ನವಾದ ಸೇವಾ ಯೋಜನೆಗಳು ಪ್ರತೀ ವಷ೯ ಜಾರಿಗೊಳ್ಳುವ ಮೂಲಕ ರೋಟರಿ ಸಂಸ್ಥೆಯು ಜನಸ್ಮೇಹಿಯಾಗಿ ಮುಂದುವರೆದಿದೆ ಎಂದೂ ರಾಜೇಶ್ ನುಡಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ  ಜಿಲ್ಲಾ  ಯೋಜನಾ ನಿದೇ೯ಶಕರಾದ ಅಂಕಾಚಾರಿ ಅವರನ್ನು ಈ ಸಂದಭ೯ ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ನ  ನೂತನ ಕಾಯ೯ದಶಿ೯ ಡಾ. ಚೇತನ್ ಜಿ.ಡಿ. ವಂದಿಸಿದ ಕಾಯ೯ಕ್ರಮದಲ್ಲಿ ನಿಗ೯ಮಿತ ಅಧ್ಯಕ್ಷ ರತ್ನಾಕರ್ ರೈ,  ನಿಗ೯ಮಿತ ಕಾಯ೯ದಶಿ೯ ಕ್ಯಾರಿ ಕಾಯ೯ಪ್ಪ ವೇದಿಕೆಯಲ್ಲಿದ್ದರು.

ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಬಿ.ಜಿ. ಅನಂತಶಯನ, ಡಾ.ಚೆರಿಯಮನೆ ಪ್ರಶಾಂತ್, ಅನಿಲ್ ಹೆಚ್.ಟಿ,   ಜಿ.ಆರ್.ರವಿಶಂಕರ್, ಅನಿತಾ ಪೂವಯ್ಯ, ಗಾನಾ  ಪ್ರಶಾಂತ್, ಶ್ರೀಹರಿರಾವ್,  ಟಿ.ಕೆ.ಸುಧೀರ್, ದೀಪಾರಶ್ಮಿ, ಕಟ್ಟೆಮನೆ ಸೋನಜಿತ್, ನಿಶಾಂತ್ ಬೆಳ್ಯಪ್ಪ, ಸ್ನೇಹಿತ್, ಕಾಯ೯ಕ್ರಮ ನಿವ೯ಹಿಸಿದ್ದರು.
ಕೊಡಗು, ಮೈಸೂರು ಜಿಲ್ಲೆಗಳ  ವಿವಿಧ ರೋಟರಿ ಸಂಸ್ಥೆಗಳ ಸದಸ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೋಮವಾರಪೇಟೆ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ*

ಜುಲೈ 5, 2026

*ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ 2.3 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ*

ಜುಲೈ 5, 2026

*ಮಡಿಕೇರಿ ನಗರ ಯುವ ಕಾಂಗ್ರೆಸ್ ಗೆ ಹೊಸ ನಾಯಕತ್ವ : ಅಧ್ಯಕ್ಷರಾಗಿ ಅರ್ಜುನ್ ಸೂರ್ಯ ಆಯ್ಕೆ*

ಜುಲೈ 5, 2026

*ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ 2.3 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ*

ಜುಲೈ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ NEWS DESK ಜು.5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ…

*ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪಿ.ಆರ್.ರಾಜೇಶ್ , ಕಾಯ೯ದಶಿ೯ಯಾಗಿ ಡಾ.ಚೇತನ್ ಪದಗ್ರಹಣ; ಸಮಾಜಮುಖಿ ಸದಸ್ಯರು ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರಬುನಾದಿ – ಪ್ರಕಾಶ್ ಬೆಳವಾಡಿ*

ಜುಲೈ 5, 2026

*ಮಡಿಕೇರಿ ನಗರ ಯುವ ಕಾಂಗ್ರೆಸ್ ಗೆ ಹೊಸ ನಾಯಕತ್ವ : ಅಧ್ಯಕ್ಷರಾಗಿ ಅರ್ಜುನ್ ಸೂರ್ಯ ಆಯ್ಕೆ*

ಜುಲೈ 5, 2026

*ಗುಮ್ಮನಕೊಲ್ಲಿ ವೃತ್ತಕ್ಕೆ ಅರೆಸೇನಾಪಡೆ ಯೋಧರ ವೃತ್ತ ಎಂದು ನಾಮಕರಣಕ್ಕೆ ಆಗ್ರಹ*

ಜುಲೈ 4, 2026

*ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯಕ್ಕೆ ಕರವೇ ಸ್ವಾಭಿಮಾನಿ ಬಣ ಮನವಿ*

ಜುಲೈ 4, 2026

* ಕೊಡಗು : ಜಿಲ್ಲಾಸ್ಪತ್ರೆ, ಸರ್ಕಾರಿ ಕಚೇರಿಗಳು ಮತ್ತು ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭೇಟಿ : ಪರಿಶೀಲನೆ*

ಜುಲೈ 4, 2026

*ಎಂ.ಬಿ. ವಿನ್ಸೆಂಟ್ ಅವರಿಗೆ ಜ್ಞಾನ ಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ : ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ : ಅಮ್ಮಾಟಂಡ ಎ.ಜೋಯಪ್ಪ

ಜುಲೈ 4, 2026

*ಕೊಡವ ಅಕಾಡೆಮಿ ಮತ್ತು ನಾಪೋಕ್ಲು ಕೊಡವ ಸಮಾಜದಿಂದ ಮಕ್ಕಡ ನಮ್ಮೆ*

ಜುಲೈ 3, 2026

*ನಿವೃತ್ತ ಸೇನಾಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳಿಂದ ಮುಖ್ಯಮಂತ್ರಿಗಳ ಭೇಟಿ : ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ*

ಜುಲೈ 3, 2026

*ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೊಠಡಿ ಉದ್ಘಾಟನೆ*

ಜುಲೈ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.