

ಮಡಿಕೇರಿ ಆ.16 NEWS DESK : ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸದಸ್ಯರಾದ ಭೋಜಮ್ಮ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಹಳೇ ವಿದ್ಯಾರ್ಥಿ, ಭೂಸೇನೆಯ ನಿವೃತ್ತ ಸೇನಾನಿ ಹೆಚ್ ಆರ್ ಲಿಂಗರಾಜು ಧ್ವಜಾರೋಹಣವನ್ನು ನೆರವೇರಿಸಿ ಮಕ್ಕಳಿಗೆ ಸೇನೆಗೆ ಸೇರಿ ದೇಶಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿದ್ವಾನ್ ಬಿ ಸಿ ಶಂಕರಯ್ಯ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ನಟರಾಜ ಸಂಗೀತ ನೃತ್ಯ ಕಲಾ ಕೇಂದ್ರ ಇವರಿಂದ ನೃತ್ಯ ವೈಭವ , ವಿದೂಷಿ ಪ್ರಗತಿ ಅವರಿಂದ ಭರತನಾಟ್ಯ, ಮೈಸೂರಿನ ಧರ್ಮವೀರ್ ಮೆಲೋಡಿ ತಂಡದವರಿಂದ ಸಂಗೀತ ವೈಭವ ಕಾರ್ಯಕ್ರಮವು ಮನಸೂರೆಗೊಂಡಿತು. ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಸಂಸ್ಥೆ ವಿದ್ಯಾರ್ಥಿಗಳಿಂದ ಭಾಷಣ ನೃತ್ಯ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸಿ ಜಿ ಮಂದಪ್ಪ ವಹಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಸ್ನೇಹ ಸ್ವಾಗತಿಸಿ ತ್ರಿಷಾ ವಂದಿಸಿ, ಅಶ್ವದಿ ನಿರೂಪಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ರೀಟಾ ಉಪಸ್ಥಿತರಿದ್ದು, ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.









