ಮಡಿಕೇರಿ NEWS DESK ಆ.23 : ಸೋಮವಾರಪೇಟೆ ತಾಲ್ಲೂಕಿನ ಹುದಗೂರು ಗ್ರಾಮದಲ್ಲಿ ನಡೆದ ನಾಟಿ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಅವರು ನಾಟಿ ಕಾರ್ಯ ಮಾಡಿ ಗಮನ ಸೆಳೆದರು. ಐಮುಡಿಮಂಡ ಗಣೇಶ್ ಅವರ ಗದ್ದೆಯಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೆಷನ್ ಸೋಮವಾರಪೇಟೆ ಇವರ ವತಿಯಿಂದ ಆಯೋಜಿಸಿದ್ದ 7ನೇ ವರ್ಷದ ನಾಟಿ ಹಬ್ಬ ಮತ್ತು ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಪಾಲ್ಗೊಂಡಿದ್ದರು.











