
ಸುಂಟಿಕೊಪ್ಪ ಆ.29 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 61ನೇ ಸ್ವರ್ಣ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರೀ ರಾಮ ಮಂದಿರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ದಿನದ ವಿಶೇಷ ಪೂಜಾ ಕೈಂಕರ್ಯಗಳನ್ನು ಹಿರಿಯ ಹಾ.ಮ.ಗಣೇಶ್ ಶರ್ಮಾ, ಮಂಜುನಾಥ್ ಶರ್ಮಾ ನೆರವೇರಿಸಿದರು. ಮದ್ಯಾಹ್ನ ಮಹಾಪೂಜೆ, ಮಂಗಳಾರತಿ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಶ್ರೀರಾಮ ಸೇವಾ ಸಮಿತಿ ಟ್ರಸ್ಟಿ ಕಾರ್ಯದರ್ಶಿ ಅಶೋಕ್ ಶೇಟ್, ಟ್ರಸ್ಟಿ ಎ.ಲೋಕೇಶ್‍ಕುಮಾರ್, ಶಾಂತರಾಂ ಕಾಮತ್, ಬಿ.ಎಂ.ಸುರೇಶ್, ಧನು ಕಾವೇರಪ್ಪ, ಎಂ.ಎಸ್.ಸುನಿಲ್, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಸದಾಶಿವ, ಪಟ್ಟೆಮನೆ ಅನಿಲ್‍ಕುಮಾರ್, ಬಿ.ಕೆ.ಮೋಹನ್, ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್,ಉಪಾಧ್ಯಕ್ಷರುಗಳಾದ ಬಿ.ಕೆ.ಪ್ರಶಾಂತ್, ಸಿ.ಸಿ.ಸುನಿಲ್‍ಕುಮಾರ್, ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ನಿಖಿಲ್, ಖಜಾಂಚಿ ಪದ್ಮನಾಭ, ಪದಾಧಿಕಾರಿ ಎಂ.ಪಾಂಡ್ಯನ್, ಹೆಚ್.ನವೀನ್, ಜಿ.ಹೃತಿಕ್, ಆರ್.ಮಣಿ, ಕೆ.ಎಂ.ಅಜಿತ್, ಆರ್.ಪ್ರಶಾಂತ್, ಎಸ್.ರಾಜೇಶ್, ಬಿ.ಡಿ.ಅಶ್ವಥ್, ಹೆಚ್.ಸಿ.ಯೋಗೇಶ್, ಚೇತನ್, ಆರ್.ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, ದಿನೇಶ್, ಮಿಥುನ್, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಭಕ್ತಾಧಿಗಳು ನೇರೆದಿದ್ದರು.








