ಮಡಿಕೇರಿ ಸೆ.9 NEWS DESK : ಮಡಿಕೇರಿ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಆಯುಧ ಪೂಜೆ ಸಲ್ಲಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ವೀರ ಪರಂಪರೆಯ ನಾಡಿಯಲ್ಲಿ ಆಯುಧ ಪೂಜೆಯ ಸಂಪ್ರದಾಯಕ್ಕೆ ವಿಶೇಷ ಆದ್ಯತೆ ಇದ್ದು, ಸೆಪ್ಟಂಬರ್ ಮೂರರಂದು ಕೊಡಗಿನ ಹೆಚ್ಚಿನೆಡೆ ಕೈಲ್ ಪೊಳ್ದ್ ನಮ್ಮೆಯನ್ನು ಆಚರಿಸಲಾಗುತ್ತಿದೆ. ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ನಮ್ಮೆಯನ್ನು ಎಂದು ಹೇಳಿದರು. ಕೋವಿ ಒಡಿಕತ್ತಿಯನ್ನು ನೀಡುವ ಮೂಲಕ ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು. ಸಮಾಜದ ಉಪಾದ್ಯಕ್ಷರಾದ ಕೇಕಡ ವಿಜು ದೇವಯ್ಯ, ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್‌ಕುಮಾರ್, ಜಂಟಿಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮಂಡೀರ ಸದಾಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆವಂಡ ರವಿ ಬಸಪ್ಪ, ಕನ್ನಂಡ ಕವಿತ ಕಾವೇರಮ್ಮ, ಬೊಪ್ಪಂಡ ಸರಳ ಕರುಂಬಯ್ಯ, ಕಾಂಡೇರ ಲಲ್ಲು ಕುಟ್ಟಪ್ಪ, ವ್ಯವಸ್ಥಾಪಕಿ ಮೈನಾ ಬೋಜಮ್ಮ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸಮಾಜದ ನಿರ್ದೇಶಕರು, ಸಿಬ್ಬಂದಿವರ್ಗದ ಪುರುಷರು ಹಾಗೂ ಮಹಿಳೆಯರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ನಂತರ ವಿವಿಧ ಕ್ರೀಡೆಯನ್ನು ಆಯೋಜಿಸಿ ವಿಜೇತರೀಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ವಿಶೇಷ ಬೋಜನವನ್ನು ಏರ್ಪಡಿಸಲಾಗಿತ್ತು.











