
ನಾಪೋಕ್ಲು ಸೆ.29 NEWS DESK : ನಾಪೋಕ್ಲು ದವಸ ಭಂಡಾರದ 2024-25ನೇ ಸಾಲಿನ 90ನೇ ವಾರ್ಷಿಕ ಮಹಾಸಭೆಯು ಭಗವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ದವಸ ಭಂಡಾರದ ಅಧ್ಯಕ್ಷರಾದ ಕಂಗಾಂಡ ಜಾಲಿ ಪೂವಪ್ಪ ಅವರ ಅಧಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದವಸ ಬಂಡಾರ ಅಭಿವೃದ್ಧಿ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಹಾಗೂ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಉದಯಶಂಕರ್, ಅಶೋಕ. ಅಂಬಿ ಕಾರ್ಯಪ್ಪ, ರಘು ಕರುಂಬಯ್ಯ, ಹಿರಿಯರಾದ ಕಾವೇರಪ್ಪ ಸಂಸ್ಥೆಯ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ದವಸ ಭಂಡಾರದ ಉಪಾಧ್ಯಕ್ಷ ಶಿವಚಳಿಯಂಡ ಕಿಶೋರ್ ಬೋಪಣ್ಣ, ನಿರ್ದೇಶಕರುಗಳಾದ ಶಿವಚಳಿಯಂಡ ಸುಭಾಷ್ ಸೋಮಯ್ಯ, ರಾಜೇಶ್ ತಮ್ಮಯ್ಯ, ಪಡಿಯಮ್ಮಂಡ ಮನು ಮಹೇಶ್, ಅರೆಯಡ ವಿನೋದ್, ಅಶೋಕ, ಬೊಪ್ಪಂಡ ಕಾಳಪ್ಪ, ಅಜ್ಜೇಟ್ಟೀರ ರಾಣಿ, ಕುಂಬಂಡ ಚಿತ್ರಾ, ಕಾರ್ಯದರ್ಶಿ ಕುಂಬಂಡ ಕೇಶವ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









