
ಮಡಿಕೇರಿ NEWS DESK ಅ.1 : ನಗರದ ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಈ ಬಾರಿ 63ನೇ ವರ್ಷದ ದಸರಾ ಉತ್ಸವವನ್ನು ಆಚರಿಸಲು ಸಿದ್ದವಾಗಿದೆ ಎಂದು ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಅಧ್ಯಕ್ಷ ಡಿ.ಎ.ಜಗದೀಶ್ ತಿಳಿಸಿದ್ದಾರೆ. ಈ ಬಾರಿ ಮಂಟಪದಲ್ಲಿ ಆನಂದ ರಾಮಾಯಣದಿಂದ ಆರಿಸಿದ ಮಹಾ ಸಾದ್ವಿ ಸೀತೆಯ ಚಂಡಿಕಾವತಾರ ಎಂಬ ‘ಕಥೆ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಎರಡು ಟ್ರ್ಯಾಕ್ಟರ್ ಬಳಸಲಾಗುತ್ತಿದ್ದು, ದಿಂಡಿಗಲ್‌ನ ಮಾರ್ಟೀನ್ ಲೈಟಿಂಗ್ ಸಂಸ್ಥೆ ಲೈಟಿಂಗ್ ಬೋರ್ಡ್ ಅಳವಡಿಸಲಿದೆ. ಮಂಗಳೂರಿನ ಜೆಎಸ್ ಸೌಂಡ್ಸ್ ನವರು ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸ್ಪೆಷಲ್ ಎಫೆಕ್ಟ್ ವ್ಯವಸ್ಥೆ ಮಾಡಲಿದ್ದು, ಮಂಗಳೂರಿನ ಸ್ವಸ್ತಿಕ್ ಫಯಸ್‌ನವರು ಫೈರ್ ಎಫೆಕ್ಟ್ ನೀಡಲಿದ್ದಾರೆ. ತಂಡದ ಸದಸ್ಯರಾದ ಜಯರಾಂ ಆಚಾರ್ಯ, ಶೇಖರ್, ಹರೀಶ್ ಭೀಮಯ್ಯ, ಜನ್ನು, ಶಶಿ, ಉಮೇಶ ಹಾಗೂ ಇತರರು ಪ್ಲಾಟ್ ಫಾರಂ ನಿರ್ಮಿಸಲಿದ್ದಾರೆ. ಕಲಾಕೃತಿಗಳಿಗೆ ಚಲನ ವಲನವನ್ನು ಸಮಿತಿಯ ಸದಸ್ಯರೇ ನೀಡಲಿದ್ದು, ಸಂಭಾಷಣೆ, ಧ್ವನಿ ಮುದ್ರಣ, ಸೆಟ್‌ವರ್ಕ್ ಹಾಗೂ ವಿಶೇಷ ಕಲಾಕೃತಿಗಳನ್ನು ಕ್ರಿಯೇಟಿವ್ ಸ್ಟುಡಿಯೋ ತಂಡ ಹಾಗೂ ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ತಯಾರಿಸುತ್ತಿದ್ದಾರೆ. ರೂ. 28 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು-ಪೂಕೋಡುವಿನ ಬೀಟ್‌ಲೆಸ್ ಬ್ಲ್ಯಾಕ್ ಗ್ರೂಪ್ ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ. ನವರಾತ್ರಿಯಂದು ಮಹಾದೇವಪೇಟೆ ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಜಗದೀಶ್ ಮಾಹಿತಿಯಿತ್ತರು.









