ವಿರಾಜಪೇಟೆ ಅ.6 NEWS DESK : ನಮ್ಮ ಬದುಕಿಗೆ ಆಧಾರವಾದ, ನಮ್ಮ ಕೆಲಸವನ್ನು ಸುಗಮಗೊಳಿಸುವ ನಿರ್ಜೀವ ವಸ್ತುಗಳಲ್ಲಿಯೂ ಜೀವಂತ ದೈವತ್ವವನ್ನು ಕಾಣುವುದು ಮತ್ತು ಅದರ ನಂಬಿಕೆಯ ದ್ಯೋತಕವೇ ಈ ಆಯುಧ ಪೂಜೆ ಹಬ್ಬ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ವಿರಾಜಪೇಟೆಯ ಬಸ್ಸು ನಿಲ್ಧಾಣದಲ್ಲಿ ಆಯೋಜಿಸಲಾಗಿದ್ದ ಕೊಡಗು ಖಾಸಗಿ ¨ಸ್ಸ್ ಕಾರ್ಮಿಕರ ಸಂಘ ವಿರಾಜಪೇಟೆ ಇವರ 18ನೇ ವರ್ಷದ ಆಯುಧ ಪೂಜೆ ಹಾಗು ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಪೊನ್ನಣ್ಣ ಅವರು, ಆಯುಧ ಪೂಜೆ ಕೇವಲ ಉಪಕರಣಗಳ ಪೂಜೆಯಲ್ಲ, ಅದು ಮನುಷ್ಯನ ಸೃಜನಶೀಲತೆಗೆ ಮತ್ತು ಕೌಶಲ್ಯಕ್ಕೆ ಸಲ್ಲಿಸುವ ಗೌರವ. ವಿಶ್ವಕರ್ಮನ ಚೈತನ್ಯವು ಪ್ರತಿಯೊಂದು ಉಪಕರಣದಲ್ಲಿ ಮತ್ತು ಅದನ್ನು ಬಳಸುವ ಕುಶಲಕರ್ಮಿಯಲ್ಲಿ ನೆಲೆಸಿದೆ. ನಮ್ಮ ದೇಹದ ಒಳಗಿನ ಆಂತರಿಕ ದ್ವೇಷವನ್ನು ಸಂಹಾರ ಮಾಡಿ ಒಳ್ಳೆಯ ಶಕ್ತಿಯ ಗೆಲುವು, ದುಷ್ಟ ಶಕ್ತಿಯ ಸೋಲು ಕಾಣುವಂತಾಗಬೇಕು. ರಾಜ್ಯದ ಎಲ್ಲಾ ಭಾಗಗಳಲ್ಲಿ ನಾಡ ಹಬ್ಬ ದಸರಾಗೆ ಒಂದು ದಿನದ ಮುಂದೆ ಆಚರಣೆ ಮಾಡುವ ಹಬ್ಬವೇ ಈ ಆಯುಧ ಪೂಜೆ. ಆಯುಧ ಪೂಜೆಯಲ್ಲಿ ಎಲ್ಲರ ಸುರಕ್ಷತೆಗಾಗಿ ಜಗನ್ಮಾತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು. ಅರಮೇರಿ ಕಳಂಚೇರಿ ಮಠದ ಮಠಾದೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಬೆಳೆಸಬೇಕಾದರೆ ಇಂತಹ ಕಾರ್ಯಕ್ರಮಗಳು ಅವಶ್ಯ. ಆಯುಧ ಪೂಜೆ ಗತಕಾಲದಿಂದ ಆಯೋಜಿಸಿಕೊಂಡು ಬರುತ್ತಿರುವ ಹಬ್ಬವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವಂತಗಾಬೇಕು. ಭಾರತ ಕೃಷಿ ಪ್ರಧಾನವಾದ ದೇಶ. ನಮ್ಮ ರಕ್ಷಣೆಗೆ ಆಯುಧ ಬೇಕು, ಕೃಷಿ ಚಟುವಟಿಕೆ, ಕಾರ್ಖಾನೆಗಳಿಗೆ ಯಂತ್ರೋಪಕರಣಗಳು ಬೇಕು. ಸಂಚರಿಸಲು ವಾಹನಗಳು ಬೇಕು. ಇದಕ್ಕೆಲ್ಲ ಸಾಮೂಹಿಕವಾಗಿ ಪೂಜೆ ನಡೆಸಿ, ಭಕ್ತಿ ಪೂರ್ವಕವಾಗಿ ನಮ್ಮ ರಕ್ಷಣೆಗಾಗಿ ಬೇಡಿಕೊಳ್ಳುವುದೇ ಆಯುಧ ಪೂಜೆಯಾಗಿದೆ ಎಂದರು. ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‍ನ ಧರ್ಮ ಗುರು ರೆ.ಫಾ.ಮದಲೈಮುತ್ತು ಮಾತನಾಡಿ, ನಾವು ಆಚರಿಸುವ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಕುರಿತು ನಮ್ಮಲ್ಲಿ ಮಾಹಿತಿ ಮತ್ತು ತಿಳುವಳಿಕೆ ಇರಬೇಕು. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ0iÉುೀ ನಮ್ಮ ನಮ್ಮ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಬಗ್ಗೆ ತಿಳಿಸಿಕೊಡಬೇಕು ಎಂದರು. ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಶ್ರೀಮಂತರಿಲ್ಲ ಏನಾದರೂ ಒಂದು ವೃತ್ತಿ ಮಾಡಿ ಮನೋಸಹಜವಾಗಿ ಬದುಕುವುದೇ ಜೀವನ. ಎಲ್ಲರೂ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಹಬಾಳ್ವೆಯಿಂದ ಬಾಳಬೇಕಾಗಿದೆ. ಚಾಲಕರು ಮಾನವೀಯತೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾ ಅಧ್ಯಕ್ಷ ಜಾನ್ಸನ್ ಪಿಂಟೋ, ಬಸ್ಸು ಕಾರ್ಮಿಕ ಸಮಘಟನೆಯ ಅಲ್ಲಂಡ ಕಸ್ತೂರಿ ಚಂಗಪ್ಪ, ಕೆಪಿಟಿ ಮಾಲೀಕರಾದ ಇಬ್ರಾಹಿಂ, ಹ್ಯಾರಿಸ್ ಬಾಖವಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ವಿರಾಜಪೇಟೆಯ ಕೊಡಗು ಖಾಸಗಿ ¨ಸ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ಕುಂಬೇಯಂಡ ಸುರೇಶ್ ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘದಲ್ಲಿ 120 ಸದಸ್ಯರಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಸಾಮೂಹಿಕ ಆಯುಧ ಪೂಜೆಯನ್ನು ನಡೆಸುತ್ತಿದ್ದು ಕಳೆದ 8 ವರ್ಷದಿಂದ ಅದ್ದೂರಿಯಾಗಿ ಆಚರಣೆ ಮಾಡಲು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಪ್ರಧಾನ ಸಂಚಲಕ ತೇಲಪಂಡ ಶಿವಕುಮಾರ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹಿಂದೂ ಧರ್ಮದ ಹಬ್ಬಗಳಲ್ಲಿ ಸರಕಾರದ ನಿಯಮಗಳು ಸರಿಯಲ್ಲ. ಇತ್ತೀಚಿಗೆ ನಡೆದ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹಾಕಿದ ಎಲ್ಲಾ ಕೇಸುಗಳನ್ನು ವಾಪಸು ಪಡೆಯಬೇಕು. ಹಿಂದೂಗಳ ಆಚರಣೆಗೆ ಸರಕಾರವು ಒಳ್ಳೆಯ ರೀತಿಯಲ್ಲಿ ಸ್ಪಂದಿಸಬೇಕು ಎಂದರು. ಸಮಾರೋಪ ಸಮಾರಂಭದಲ್ಲಿ ಹಿರಿಯ ಬಸ್ ಕಾರ್ಮಿಕರು, ಸಮಾಜ ಸೇವಕರು ಹಾಗು ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಆಯುಧ ಪೂಜೆ ಪ್ರಯುಕ್ತ ಸಂಘದ ಕಚೇರಿಯಲ್ಲಿ ಸಾಮೂಹಿಕ ಆಯುಧ ಪೂಜೆ ನಡೆಸಲಾಯಿತು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಪ್ರಖ್ಯಾತ ಬೈಕ್ ಸವಾರರಿಂದ ಸಾಹಸ ಪ್ರದರ್ಶನ, ವಿರಾಜಪೇಟೆ ನಾಟ್ಯಂಜಲಿ ನೃತ್ಯ ಮಂಡಳಿಯವರಿಂದ ಭಜನಾ ನೃತ್ಯ ಜನಮನ ಸೆಳೆಯಿತು. ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಆಯುಧ ಪೂಜೆ ಕಾರ್ಯಕ್ರಮಕ್ಕೆಡ ತೆರೆ ಎಳೆಯಲಾಯಿತು. ವೇದಿಕೆಯಲ್ಲಿ ಕೋಡಿರ ವಿವೇಕ್, ಕಾಳಮಂಡ ಜಗತ್, ವಾಟೇರಿರ ಬೋಪಣ್ಣ, ಮನು ನಂಜಪ್ಪ, ಲೋಕೇಶ್ ಅಯ್ಯಪ್ಪ, ವಾಟೇರಿರ ಜೀವನ, ಕುಂಡ್ರಂಡ ಅನಿಲ್, ಆಲ್ವಿನ್ ಡಿಸೋಜ ಇದ್ದರು. ಈ ಸಂದರ್ಭ ಕಾರ್ಯದರ್ಶಿ ವಿನೋದ್ ಜೆ.ಸಿ.ಬಿ, ಖಜಾಂಚಿ ದಿನೇಶ್ ನಾಯರ್, ನಿರ್ದೆಶಕರಾದ ಲೋಕೇಶ್ ರೈ ಸೇರಿದಂತೆ ಬಸ್ಸು ಕಾರ್ಮಿಕರ ಸಂಘದ ಪದಾಧಿಕಾರಿಗಳು, ಚಾಲಕರು, ನಿರ್ವಾಹಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.











