
ಬೆಂಗಳೂರು ಅ.8 NEWS DESK : ರಕ್ಷಣಾ ಸಚಿವಾಲಯದ (ಸೇನೆಯ) ಕೇಂದ್ರ ಕಚೇರಿಯ ಪರವಾಗಿ 515 ಸೇನಾ ನೆಲೆ ಕಾರ್ಯಾಗಾರ (ಎಬಿಡಬ್ಲೂ) ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳ ಮಹಾನಿರ್ದೇಶಕರು ಮತ್ತು ಇಂಡಿಅಸ್ತ್ರ (IndyASTRA) ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪರವಾಗಿ ಭಾರತೀಯ ಸೇನಾ ಭೂ ವ್ಯವಸ್ಥೆಗಳಿಗಾಗಿ ಕೃತಕ ಬುದ್ಧಿಮತ್ತೆ ಆಧರಿಸಿದ ಡ್ರೋನ್ ಸಾಮರ್ಥ್ಯಗಳನ್ನು ವೇಗಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಪಾಲುದಾರಿಕೆಯು ಕಾರ್ಯಾಚರಣೆಯ ಅಗತ್ಯತೆಗಳು ಮತ್ತು ಆತ್ಮನಿರ್ಭರ ಭಾರತದ ದೂರದೃಷ್ಟಿಯೊಂದಿಗೆ ಹೊಂದಿಕೆಯಾಗುತ್ತದೆ. ಈ ಸಹಯೋಗವನ್ನು 515 ಎಬಿಡಬ್ಲೂ ಮೂಲಕ ಸಂಯೋಜಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ಆಧರಿಸಿದ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್ ಸಿಎಸ್ ) ಮತ್ತು ಸ್ಟ್ಯಾಂಡರ್ಡ್ ಡ್ರೋನ್ ಆಪರೇಟಿಂಗ್ ಪ್ಲಾಟ್‌ಫಾರ್ಮ್ (ಎಸ್ ಡಿಒಪಿ) ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ ಡ್ರೋನ್ ತಯಾರಿಕೆಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಸಕ್ರಿಯಗೊಳಿಸುವುದು ಒಪ್ಪಂದದ ಉದ್ದೇಶವಾಗಿದೆ. ಡ್ರೋನ್ ತಂತ್ರಜ್ಞಾನಗಳ ಸಮಗ್ರ ಮೌಲ್ಯಮಾಪನಕ್ಕಾಗಿ IndyASTRA 515 ಎಬಿಡ್ಲೂಗೆ ತಾಂತ್ರಿಕ ಸಲಹೆಯನ್ನು ಒದಗಿಸುತ್ತದೆ. ಅದರಲ್ಲಿ ಉಪವ್ಯವಸ್ಥೆಯ ವಿಮರ್ಶೆಗಳು, ಏಕೀಕರಣ ಸಿದ್ಧತೆ ಮತ್ತು ಸೇನಾ ಮಾನದಂಡಗಳ ಪಾಲನೆ ಅಂಶಗಳೂ ಸೇರಿವೆ. ಪರಸ್ಪರ ಕಾರ್ಯಸಾಧ್ಯತೆ, ಸುರಕ್ಷತೆ ಮತ್ತು ಮಾನದಂಡಗಳ ಅನುಸರಣೆಗೆ ಒತ್ತು ನೀಡುವ ಮೂಲಕ ಇಂಡಿಯಾಸ್ಟ್ರಾಗೆ ಉತ್ಪಾದನಾ ಪ್ರಯೋಗಗಳು, ದೃಢೀಕರಣ ಮತ್ತು ಪ್ರಮಾಣೀಕರಣಕ್ಕೆ 515 ಎಬಿಡಬ್ಲೂ ಅಗತ್ತೆ ಆಧರಿಸಿದ ವಿನಂತಿಗಳನ್ನು ರವಾನಿಸುತ್ತದೆ. ಈ ಒಪ್ಪಂದವು ಸ್ಥಳೀಯ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ನಿರ್ಣಾಯಕ ಮಾನವರಹಿತ ವ್ಯವಸ್ಥೆಗಳಿಗೆ ಆಮದು ಅವಲಂಬನೆಯನ್ನು ತಗ್ಗಿಸುತ್ತದೆ. ಇದು ಸೇನಾ ಕಾರ್ಯಾಚರಣೆಗಳನ್ನು ಬೆಂಬಲಿಸುವ ಕೃತಕ ಬುದ್ಧಿಮತ್ತೆ ಆಧರಿಸಿದ ಡ್ರೋನ್ ಪರಿಹಾರಗಳಿಗಾಗಿ ಕಡಿಮೆ ಸಮಯದಲ್ಲಿ ಒದಗಿಸುತ್ತದೆ. ಭವಿಷ್ಯದ ಕಾರ್ಯಕ್ರಮಗಳು ಮತ್ತು ಸಂಬಂಧಿತ ಉಪವ್ಯವಸ್ಥೆಗಳಿಗೆ ಪುನರಾವರ್ತಿಸಬಹುದಾದಂತೆ ಈ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಪಾಲುದಾರಿಕೆಯು ಕಾರ್ಯಾಚರಣೆಯ ಸಿದ್ಧತೆ ಮತ್ತು ಸ್ವಾವಲಂಬನೆಯನ್ನು ವೃದ್ಧಿಸುತ್ತದೆ.











