
ನಾಪೋಕ್ಲು ಅ.9 NEWS DESK : ಅಂತರಾಷ್ಟ್ರೀಯ ಮಟ್ಟದ ಮ್ಯಾರಥಾನ್ ನಲ್ಲಿ ಕರವಟ್ಟಿರ ಚೈತ್ರ ಪಳಂಗಪ್ಪ ಸಾಧನೆ ಮಾಡಿದ್ದಾರೆ. ಇವರು 72 ಕಿಲೋಮೀಟರ್ ಅಂತರದ ಖರ್ದುಂಗ್ ಲಾ ಪಾಸ್ ಸವಾಲನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ವಾರ್ಷಿಕ ಲಡಾಕ್ ಮ್ಯಾರಥಾನ್ ಭಾಗವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಖರ್ದುಂಗ್ ಲಾ ಪಾಸ್ 72 ಕಿ.ಮೀ ಅಂತರದ ಓಟವು 17,600 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಪೌರಾಣಿಕ ಖರ್ದುಂಗ ಲಾ ಪಾಸ್ ಸೇರಿದಂತೆ ಅತ್ಯಂತ ಎತ್ತರದ ಭೂ ಪ್ರದೇಶದ ಮೂಲಕ ಹಾದು ಹೋಗಿದೆ. ಈ ಅದ್ಭುತ ಸಾಧನೆಯನ್ನು ಮಾಡಲು ಧೈರ್ಯ ಮಾಡುವ ಕ್ರೀಡಾಪಟುಗಳನ್ನು ಕರೆದುಕೊಂಡು ಹೋಗುವ ಚಾಲೆಂಜ್ ಸ್ವಯಂ ಶೋಧನೆಯ ಪ್ರಯಾಣ ಮತ್ತು ಅವರ ಅವಿನಾ ಭಾವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇಂತಹ ಕಠಿಣ ಆಯ್ಕೆಯನ್ನು ಚೈತ್ರ ಸವಾಲಾಗಿ ಸ್ವೀಕರಿಸಿ ಯಶಸ್ವಿಗೊಳಿಸಿದ್ದಾರೆ. ಇವರು ಕೊಡಗಿನ ಮಡಿಕೇರಿ ತಾಲ್ಲೂಕಿನ ಕಕ್ಕಬೆ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ನಿವಾಸಿ ನಿವೃತ್ತ ಸೈನಿಕ ಕರವಟ್ಟಿರ ಪಳಂಗಪ್ಪ ಮತ್ತು ಕಾಂತಿ ದಂಪತಿಯ ಪುತ್ರಿ.
ವರದಿ : ದುಗ್ಗಳ ಸದಾನಂದ.









