
ಮಡಿಕೇರಿ ಅ. 13 NEWS DESK : ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ನಿಂದ ಹಲವಾರು ಸಂಘಸಂಸ್ಥೆಗಳ ಸಹಯೋಗದಲ್ಲಿ ಅ. 15 ರಂದುಕೊಡಗು ಜಿಲ್ಲೆಯಾದ್ಯಂತ ಬೖಹತ್ ರೀತಿಯಲ್ಲಿ ಸ್ವಚ್ಚ ಕೊಡಗು – ಸುಂದರ ಕೊಡಗು – ತ್ಯಾಜ್ಯ ವಿಲೇವಾರಿ ಅಭಿಯಾನ ಆಯೋಜಿಸಲಾಗಿದೆ. ಬುಧವಾರ ಬೆಳಗ್ಗೆ8 ಗಂಟೆಯಿಂದ ಕೊಡಗಿನಾದ್ಯಂತ ರಸ್ತೆ ಬದಿಗಳಲ್ಲಿನ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಹೊಣೆಯರಿತ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸ್ಪಂದಿಸಲಿದೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ,ಕೊಡಗು ಹೋಂಸ್ಟೇ ಅಸೋಸಿಯೇಷನ್ , ಕೊಡಗು ಚೇಂಬರ್ ಆಫ್ ಕಾಮಸ್೯, ಕೊಡಗು ಟ್ರಾವಲ್ ಅಸೋಸಿಯೇಷನ್, ರೋಟರಿ, ಲಯನ್ಸ್ , ರೆಡ್ ಕ್ರಾಸ್, ಗ್ರೀನ್ ಸಿಟಿ ಫೋರಂ, ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯ ಹಲವಾರು ಸಂಸ್ಥೆಗಳು ಈ ಸ್ವಚ್ಚತಾ ಅಭಿಯಾನಕ್ಕೆ ಕೈಜೋಡಿಸಿವೆ ಎಂದು ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ತಿಳಿಸಿದ್ದಾರೆ. ಕೊಡಗಿನಾದ್ಯಂತ ಮುಖ್ಯ ರಸ್ತೆಗಳ ಇಕ್ಕೆಲಗಳೂ ಸೇರಿದಂತೆ ಇತರ ರಸ್ತೆಗಳ ಬದಿಗಳಲ್ಲಿರುವ ತ್ಯಾಜ್ಯಗಳನ್ನು ಆ ವ್ಯಾಪ್ತಿಯಲ್ಲಿರುವ ರೆಸಾಟ್೯, ಹೋಟೇಲ್, ರೆಸ್ಟೋರೆಂಟ್, ವತ೯ಕರು, ಸಂಘ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಕಾ೯ರೇತರ ಸಂಸ್ಥೆಗಳ ಸಹಕಾರದಲ್ಲಿ ವಿಲೇವಾರಿ ಮಾಡಿ ಸ್ವಚ್ಚತೆಯ ಸಂದೇಶವನ್ನು ಸಾರಲಾಗುತ್ತದೆ. ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಇಂಥಹ ಬೖಹತ್ ರೀತಿಯ ಸ್ವಚ್ಚತಾ ಅಭಿಯಾನ ಏಕದಿನ, ಏಕಕಾಲದಲ್ಲಿ ಆಯೋಜಿಸಲ್ಪಟ್ಟಿದೆ ಎಂದೂ ದಿನೇಶ್ ತಿಳಿಸಿದರು. ಕೊಡಗನ್ನು ಸ್ವಚ್ಚತೆಯೊಂದಿಗೆ ಸುಂದರವಾಗಿವಲ್ಲಿ ಪ್ರತೀಯೋ೯ರ ಪಾಲು ಮಹತ್ವದ್ದಾಗಿದೆ. ಹೀಗಾಗಿ ಕೊಡಗಿನ ಪ್ರತೀಯವ೯ರೂ ಕೊಡಗಿನ ಸ್ವಚ್ಚತೆಯ ಮೇಲಿನ ಕಾಳಜಿಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸಂಘದ ಪ್ರಧಾನ ಕಾಯ೯ದಶಿ೯ ನಾಸೀರ್ ಅಹಮ್ಮದ್ ಕೋರಿದ್ದಾರೆ. ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಸಂಪಕಿ೯ಸಬೇಕಾದ ಸಂಖ್ಯೆ ದಿನೇಶ್ ಕಾರ್ಯಪ್ಪ. 98441 68223., ನಾಸಿರ್ ಅಹಮದ್ 87623 45879.








