
ನಾಪೋಕ್ಲು ಅ.13 NEWSDESK : ನಾಪೋಕ್ಲು ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿದೆ. ಬೇತು ಗ್ರಾಮದ ನಿವಾಸಿ ಪಾರ್ವತಿ ಎಂಬವರ ದನದ ಕೊಟ್ಟಿಗೆ ಕುಸಿದುಬಿದ್ದಿದ್ದು, ಶೀಟುಗಳು ಪುಡಿಪುಡಿಯಾಗಿ ನಷ್ಟ ಸಂಭವಿಸಿದೆ. ದನಗಳನ್ನು ಮೇಯಲು ಬಿಟ್ಟಿದ್ದ ಕಾರಣ ಅಪಾಯದಿಂದ ಪಾರಾಗಿದೆ ಎಂದು ಪಾರ್ವತಿ ಅವರು ಮಾಹಿತಿ ನೀಡಿದ್ದಾರೆ.
ವರದಿ : ದುಗ್ಗಳ ಸದಾನಂದ.









