Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
  • *‘ಜಂತು ಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು’ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ*
  • *ಫೆ.14 ರಂದು ಕೊಡವ ಭವನ ಉದ್ಘಾಟನೆ*
  • *ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*
  • *ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*
  • *104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಕೊಡಗಿನವರಿಗೆ ರಾಜ್ಯಸಭಾ ಸ್ಥಾನ ನೀಡಲು ಆಮ್ ಆದ್ಮಿ ಪಾರ್ಟಿ ಒತ್ತಾಯ*
ಇತ್ತೀಚಿನ ಸುದ್ದಿಗಳು

*ಕೊಡಗಿನವರಿಗೆ ರಾಜ್ಯಸಭಾ ಸ್ಥಾನ ನೀಡಲು ಆಮ್ ಆದ್ಮಿ ಪಾರ್ಟಿ ಒತ್ತಾಯ*

October 13, 20252 Mins Read
Share
Facebook Twitter LinkedIn Pinterest WhatsApp Email

ಮಡಿಕೇರಿ ಅ.13 NEWSDESK : ಲೋಕಸಭಾ ಚುನಾವಣೆಯ ಸಂದರ್ಭ ನಿರಂತರವಾಗಿ ಕೊಡಗು ಜಿಲ್ಲೆಗೆ ಅನ್ಯಾಯವಾಗುತ್ತಿರುವುದರಿಂದ ಕೊಡಗಿನವರಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.ಪತ್ರಿಕಾ ಪ್ರಕಟಣೆ ನೀಡಿರುವ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಕೊಡಗು ಜಿಲ್ಲೆ ಕರ್ನಾಟಕದ ಗರ್ವವಾಗಿದ್ದು, ಶೌರ್ಯ, ಶಿಸ್ತಿನ ಜೀವನಶೈಲಿ ಮತ್ತು ದೇಶಸೇವೆಯ ಪರಂಪರೆಯಿಂದ ಪ್ರಸಿದ್ಧವಾಗಿದೆ. ಭಾರತೀಯ ಸೇನೆ, ಕ್ರೀಡಾರಂಗ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಕೊಡಗಿನ ಅನೇಕರು ತೊಡಗಿಸಿಕೊಂಡು ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ. ಈ ರೀತಿಯ ಹೆಗ್ಗಳಿಕೆಯನ್ನು ಹೊಂದಿರುವ ಕೊಡಗು ಜಿಲ್ಲೆಗೆ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಅನ್ಯಾಯವಾಗುತ್ತಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೊಡಗಿನ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡದೆ ಕಡೆಗಣಿಸುತ್ತಿವೆ ಎಂದು ಆರೋಪಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯ ಅಭ್ಯರ್ಥಿಗಳು ಚುನಾಯಿತರಾಗಿಲ್ಲ. ಈ ಕಾರಣದಿಂದ ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಧ್ವನಿ ಇಲ್ಲದಂತಾಗಿದೆ ಮತ್ತು ಸ್ಪಂದನೆ ಮರೀಚಿಕೆಯಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೂಡ ಎರಡೂ ರಾಷ್ಟ್ರೀಯ ಪಕ್ಷಗಳು ಮೈಸೂರು ಜಿಲ್ಲೆಯ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ರಾಜಕೀಯ ಶಕ್ತಿ ತುಂಬುತ್ತಿರುವ ಕೊಡಗಿನ ಜನರನ್ನು ನಿರಾಶೆಗೊಳಿಸಿದವು. ರಾಜ್ಯ ಸರಕಾರದ ನಾಮನಿರ್ದೇಶಿತ ವಿಧಾನ ಪರಿಷತ್ ಸ್ಥಾನವೂ ಜಿಲ್ಲೆಗೆ ದೊರೆತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೊಡಗು ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಯುವಜನತೆ ಉದ್ಯೋಗ ಮತ್ತು ಸ್ವಯಂ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಪ್ರಮುಖ ಖಾತೆಗಳ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಮಾಡುತ್ತಿಲ್ಲ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೊಡಗನ್ನು ಮತಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದು, ಸ್ಥಳೀಯರಿಗೆ ರಾಜಕೀಯ ಅವಕಾಶವನ್ನು ನೀಡುತ್ತಿಲ್ಲವೆಂದು ಟೀಕಿಸಿದ್ದಾರೆ. ಮುಂದಿನ ವರ್ಷ ಕೊಡಗು ಜಿಲ್ಲೆಯ ಜನರು, ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳು ರಾಜ್ಯಸಭೆಗೆ ಕೊಡಗಿನ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಒತ್ತಾಯಿಸುವ ಅನಿವಾರ್ಯತೆ ಎದುರಾಗಬಹುದು. ಆಮ್ ಆದ್ಮಿ ಪಾರ್ಟಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಶುದ್ಧತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ರಾಜಕಾರಣವನ್ನು ಪ್ರತಿನಿಧಿಸುತ್ತಿದೆ. ಇಂಡಿಯಾ ಒಕ್ಕೂಟದಲ್ಲಿದ್ದ ಎಎಪಿ ಪಕ್ಷಕ್ಕೆ ರಾಜ್ಯದಲ್ಲಿ 2024ರಲ್ಲಿ ಒಂದು ಲೋಕಸಭಾ ಸ್ಥಾನ ಕೂಡ ಸಿಗಿಲಿಲ್ಲ. ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದ ಎಎಪಿ ಪಕ್ಷದ ಕಾರ್ಯಕ್ರಮಗಳನ್ನು ನಕಲು ಮಾಡಿ ಅಧಿಕಾರದ ಗದ್ದುಗೆ ಏರಿರುವ ಸರಕಾರ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಆಮ್ ಆದ್ಮಿ ಪಾರ್ಟಿಯ ಕನಿಷ್ಠ ಓರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರತಿನಿಧಿಗೆ ಅವಕಾಶ ದೊರೆತ್ತಿದ್ದರೆ ಕರ್ನಾಟಕದ ಯುವಕರ, ರೈತರ, ನಿರುದ್ಯೋಗಿಗಳ ಹಾಗೂ ಸಾಮಾನ್ಯ ಜನರ ಸಮಸ್ಯೆಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬರುತ್ತಿತ್ತು ಮತ್ತು ಪರಿಹಾರ ದೊರೆಯುತ್ತಿತ್ತು. ಆದ್ದರಿಂದ ಇನ್ನಾದರೂ ಕರ್ನಾಟಕದಿಂದ ರಾಜ್ಯಸಭೆಗೆ ಆಮ್ ಆದ್ಮಿ ಪಾರ್ಟಿಗೆ ಒಂದು ಸ್ಥಾನ ಕಲ್ಪಿಸಲಿ ಹಾಗೂ ಆ ಸ್ಥಾನವನ್ನು ಕೊಡಗು ಜಿಲ್ಲೆಯ ಸಮರ್ಥ ಅಭ್ಯರ್ಥಿಗೆ ನೀಡಲಿ. ಹೀಗೆ ಮಾಡುವುದರಿಂದ ಕೊಡಗು ಜಿಲ್ಲೆಯ ಜನರ ಹೋರಾಟಕ್ಕೆ ನ್ಯಾಯ ಸಿಗಲಿದೆ. ಕರ್ನಾಟಕದ ಧ್ವನಿ ರಾಜ್ಯಸಭೆಯಲ್ಲಿ ಮತ್ತಷ್ಟು ಬಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share. Facebook Twitter Pinterest LinkedIn Tumblr Email WhatsApp
Previous Article*ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ : ಸಾವ೯ಜನಿಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಲು ಕರೆ*
Next Article *ಅ.17 ರಂದು ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ*

Related Posts

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

ಮಡಿಕೇರಿ,  NEWS DESK ಫೆ.10:-ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ,…

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026

*ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*

February 10, 2026

*ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*

February 10, 2026

*104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*

February 10, 2026

*ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*

February 10, 2026

*ಫೆ.15ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.